ಕರ್ನಾಟಕ

karnataka

ETV Bharat / state

ಬಿಜೆಪಿಯವರಿಗೆ ಅಧಿಕಾರ, ದುಡ್ಡು ಮುಖ್ಯ: ಸಿದ್ದರಾಮಯ್ಯ - ETv Bharat kannada news

ಬಿಜೆಪಿಯವರಿಗೆ ಅಧಿಕಾರ ಮತ್ತು ದುಡ್ಡು ಮುಖ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.

Leader of Opposition Siddaramaiah
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

By

Published : Dec 23, 2022, 10:39 PM IST

ಹುಬ್ಬಳ್ಳಿ :ಬಿಜೆಪಿ ‌ಸರ್ಕಾರ ಅವಧಿಪೂರ್ಣ ಚುನಾವಣೆ ಮಾಡಲ್ಲ. ಅವರಿಗೆ ಅಧಿಕಾರ ಮತ್ತು ದುಡ್ಡು ಮುಖ್ಯ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಮಾತನಾಡಿ, ಬಿಜೆಪಿಯವರು ಎಷ್ಟು ಸಾಧ್ಯವೋ ಅಷ್ಟು ದುಡ್ಡು ಮಾಡ್ತಾರೆ. ಎಲ್ಲದರಲ್ಲೂ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂದರು.

ಅಧಿವೇಶನದಲ್ಲಿ ಜಾನುವಾರುಗಳಿಗೆ ತಗುಲಿದ ಚರ್ಮ ರೋಗದ ಕುರಿತು ಚರ್ಚೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಚರ್ಚೆಯಾಗಬೇಕಿದೆ ಎಂದು ತಿಳಿಸಿದರು. ಮಹದಾಯಿ ವಿಚಾರವಾಗಿ ಜನವರಿ 2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದ ಮೂಲಕ ದೊಡ್ಡ ಮಟ್ಡದ ಹೋರಾಟ ನಡೆಸಲಾಗುತ್ತದೆ. ಯೋಜನೆ ಬಗ್ಗೆ ಬಿಜೆಪಿ ಏನೂ ಮಾಡಲಿಲ್ಲ. ಬಜೆಟ್​ನಲ್ಲಿ ಅಷ್ಟು ಹಣ ತೆಗೆದಿಟ್ಟಿದ್ದೀವಿ ಅಂತಾರೆ. ಆದರೆ ನಯಾಪೈಸೆ ಕೆಲಸ ಆಗಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಅವರ ಸರ್ಕಾರವೇ ಇದ್ದು ಈ ಡಬಲ್ ಇಂಜಿನ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ರಾಜ್ಯ ಬಿಜೆಪಿ ನಾಯಕರಿಗೆ: ಸಿದ್ದರಾಮಯ್ಯ

ABOUT THE AUTHOR

...view details