ಹುಬ್ಬಳ್ಳಿ:ರಾಜ್ಯದಲ್ಲಿ ಸಿಡಿಗಳ ಹಾವಳಿ ಹೆಚ್ಚಾಗುತ್ತಿರುವ ಸಮಯದಲ್ಲೇ ಅಶ್ಲೀಲ ವೀಡಿಯೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಕಳುಹಿಸಿದ ಆರೋಪದ ಮೇಲೆ ಹುಬ್ಬಳ್ಳಿಯ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಟಾಗ್ರಾಮ್ಗೆ ಅಶ್ಲೀಲ ವಿಡಿಯೋ ಪೋಸ್ಟ್; ವ್ಯಕ್ತಿ ವಿರುದ್ಧ ಸೈಬರ್ ಠಾಣೆಗೆ ದೂರು - Porn video sent on Instagram
ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ಸೈಬರ್ ಠಾಣೆ
ಹಳೇ ಹುಬ್ಬಳ್ಳಿಯ ಮುಜಾಮಿಲ್ ನವಲೂರ ಎಂಬುವನ ವಿರುದ್ಧ ದೂರು ದಾಖಲಾಗಿದೆ. ಮುಜಾಮಿಲ್ ನವಲೂರ ತಾನು ಹೊಂದಿರುವ ರಾಕ್ ವೈ-02 ಎನ್ನುವ ಇನ್ಸ್ಟಾಗ್ರಾಮ್ ಯೂಸರ್ ನೇಮ್ದಿಂದ 2020 ಮೇ 2ರಂದು ಅಪ್ರಾಪ್ತ ಹುಡುಗ-ಹುಡುಗಿಯ ಶಾಲಾ ಕೊಠಡಿಯಲ್ಲಿನ 30 ಸೆಕೆಂಡಿನ ಅಶ್ಲೀಲ ದೃಶ್ಯಾವಳಿಗಳನ್ನು ಕಳುಹಿಸಿದ್ದನು.
ಸಿಐಡಿ ಘಟಕದಿಂದ ಧಾರವಾಡ ಸಿಇಎನ್ ಠಾಣೆಗೆ ಬಂದ ದೂರನ್ನು ಪರಿಗಣಿಸಿ, ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.