ಹುಬ್ಬಳ್ಳಿ: ನಗರದ ದುರ್ಗದ ಬೈಲ್ನಲ್ಲಿ ಎರಡು ಪೊಲೀಸ್ ವಾಹನಗಳು ರಸ್ತೆಯಲ್ಲಿ ನಿಂತಿದ್ದು, ಸಾರ್ವಜನಿಕರ ಸಂಚಾರ, ವಾಹನ ಸಂಚಾರಕ್ಕೆ ತೊಂದರೆಯಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ.
ನಡು ರಸ್ತೆಯಲ್ಲಿ ನಿಂತ ಪೊಲೀಸ್ ವಾಹನಗಳು: ವಿಡಿಯೋ ವೈರಲ್ - traffic rurals
ಹುಬ್ಬಳ್ಳಿ ನಗರದ ದುರ್ಗದ ಬೈಲ್ನಲ್ಲಿ ಎರಡು ಪೊಲೀಸ್ ವಾಹನಗಳು ನಡು ರಸ್ತೆಯಲ್ಲಿ ನಿಂತಿದ್ದ ವಿಡಿಯೋ ವೈರಲ್ ಆಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗು ತುತ್ತಾಗಿದೆ.
ನಡು ರಸ್ತೆಯಲ್ಲಿ ನಿಂತ ಪೊಲೀಸ್ ವಾಹನಗಳು
ಹೊಸ ಸಂಚಾರಿ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಟ್ರಾಫಿಕ್ ಪೊಲೀಸರನ್ನು ಕಂಡರೆ ಭಯ ಪಡುವಂತಾಗಿದೆ. ಇದರ ಮಧ್ಯೆ ಪೊಲೀಸರು ಇಕ್ಕಟ್ಟಾದ ದಾರಿಯಲ್ಲಿ ವಾಹನ ನಿಲ್ಲಿಸಿ ಹೋಗಿರುವುದು ಸವಾರರ, ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.