ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಜನರಿಂದ ನಿತ್ಯ ತುಂಬಿ ತುಳುಕುತ್ತದೆ. ಇಂತಹ ಬಸ್ ನಿಲ್ದಾಣದಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಇನ್ಮುಂದೆ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕಳ್ಳರ ಕಾಟಕ್ಕೆ ಬೀಳುತ್ತೆ ಬ್ರೇಕ್... ಯಾಕೆ ಗೊತ್ತಾ?
ಹಳೇ ಬಸ್ ನಿಲ್ದಾಣಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಗೆ, ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ತೆರಳುವ ಬಸ್ಗಳು ಬರುವ ಕಾರಣದಿಂದ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಅದೇ ರೀತಿಯಾಗಿ ಕಳ್ಳರೂ ಸಹ ಕೈಚಳಕ ತೋರಿಸುತ್ತಿದ್ದಾರೆ.
ಹೌದು, ಹಳೇ ಬಸ್ ನಿಲ್ದಾಣಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಗೆ, ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ತೆರಳುವ ಬಸ್ಗಳು ಬರುವ ಕಾರಣದಿಂದ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಅದೇ ರೀತಿಯಾಗಿ ಕಳ್ಳರೂ ಸಹ ಕೈಚಳಕ ತೋರಿಸುತ್ತಿದ್ದಾರೆ. ದಿನನಿತ್ಯ ಮೊಬೈಲ್ ಮತ್ತು ಪರ್ಸ್ ಕಳ್ಳತನ ಪೊಲೀಸರಿಗೆ ಹಾಗೂ ಪ್ರಯಾಣಿಕರಿಗೆ ತಲೆನೋವಾಗಿತ್ತು. ಹಾಗಾಗಿ ಹಳೇ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಹಳೇ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಅಷ್ಟೇ ಅಲ್ಲದೆ ಕುಡುಕರು, ಭಿಕ್ಷೆ ಬೇಡುವವರಿಂದ ಪ್ರಯಾಣಿಕರು ಹಲವು ತೊಂದರೆ ಅನುಭವಿಸಬೇಕಾಗಿತ್ತು. ಈಗ ಪೊಲೀಸರು ಇರುವ ಕಾರಣ ತೊಂದರೆ ಕಡಿಮೆಯಾಗಿದ್ದು, ಹೆಚ್ಚಿನ ಪೊಲೀಸ್ ನಿಯೋಜನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.