ಧಾರವಾಡ: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ.
ಧಾರವಾಡದ ಪ್ರಮುಖ ರಸ್ತೆಗಳಾದ ಸುಭಾಷ ರಸ್ತೆ, ಟಿಕಾರೆ ರಸ್ತೆ, ಅಕ್ಕಿಪೇಟೆ ಸೇರಿದಂತೆ ವಿವಿಧ ಕಡೆಗೆ ತೆರಳಿ ಅಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ. ರಾತ್ರಿ ಕರ್ಫ್ಯೂ ಬಳಿಕ ಅಂಗಡಿಗಳನ್ನು ತೆರೆದ ಮಾಲೀಕರಿಗೆ ಪೊಲೀಸರು ಅಂಗಡಿಗಳಿಗೆ ತೆರಳಿ ಕ್ಲೋಸ್ ಮಾಡಿಸಿದ್ದಾರೆ. ಇದರಿಂದ ಸಣ್ಣ ವ್ಯಾಪಾರಸ್ಥರು ಗೊಂದಲಕ್ಕೀಡಾಗಿದ್ದಾರೆ.