ಹುಬ್ಬಳ್ಳಿ: ರಭಸವಾಗಿ ಹರಿಯುತ್ತಿರುವ ಬೆಣ್ಣೆ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನೋರ್ವನನ್ನು ನಗರ ಮೀಸಲು ಪಡೆಯ ಪೇದೆಯೊಬ್ಬರು ರಕ್ಷಿಸಿದ್ದು, ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೇದೆ ಪ್ರದೀಪ ಮಹಾದೇವಪ್ಪ ಅಣ್ಣಿಗೇರಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಇಮಾಂಸಾಬ್ ಕರೀಮಸಾಬ್ ಬೆಳಗಲಿ (72) ಎಂಬವರು ಊರ ಹೊರ ವಲಯದ ನಾರಾಯಣಪುರ ಗ್ರಾಮ ಬಳಿಯ ಬೆಣ್ಣೆ ಹಳ್ಳದ ದಂಡೆಯಲ್ಲಿ ಉರುವಲು ಕಟ್ಟಿಗೆ ತರಲು ಸೋಮವಾರ ಹೋಗಿದ್ದರು. ಕಟ್ಟಿಗೆ ಕಡಿಯುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದರು.
ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನ ರಕ್ಷಿಸಿದ ಪೇದೆ ಇದನ್ನು ಗಮನಿಸಿದ್ದ ಯುವಕರಿಬ್ಬರು ವೃದ್ಧನನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗದೇ ಅಸಹಾಯಕರಾಗಿ ಅಲ್ಲಿಯೇ ನಿಂತಿದ್ದರು. ಇದೇ ವೇಳೆ ಕರ್ತವ್ಯಕ್ಕೆಂದು ಹುಬ್ಬಳ್ಳಿಯತ್ತ ತೆರಳುತ್ತಿದ್ದ ಯರಗುಪ್ಪಿ ಗ್ರಾಮದ ಪ್ರದೀಪ ಮಹಾದೇವಪ್ಪ ಅಣ್ಣಿಗೇರಿ ಎಂಬ ಮೀಸಲು ಪಡೆಯ ಪೇದೆಗೆ ವಿಷಯ ತಿಳಿಸಿದ್ದಾರೆ.
ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನ ರಕ್ಷಿಸಿದ ಪೇದೆ ಕೂಡಲೇ ಕಾರ್ಯಪ್ರವೃತರಾದ ಪ್ರದೀಪ್, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧ ಇಮಾಂಸಾಬ್ ಬೆಳಗಲಿ ಅವರನ್ನು ರಕ್ಷಿಸಿದ್ದಾರೆ. ಪೇದೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬೆಣ್ಣೆಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧನ ರಕ್ಷಿಸಿದ ಪೇದೆ