ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಂದು ಪೊಲೀಸರು ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳ ಚಳಿ ಬಿಡಿಸಿದ್ದಾರೆ. ಕಳೆದ ವಾರ ನಗರದ ಸಬ್ ಜೈಲ್ ಎದುರು ನಡೆದಿದ್ದ ಗ್ಯಾಂಗ್ ವಾರ್ನಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ರೌಡಿಶೀಟರ್ಗಳಿಗೆ ಶಾಕ್ ನೀಡಿದ್ದಾರೆ.
ಬಾಲ ಬಿಚ್ಚಿದ್ರೆ ಹುಷಾರ್... ನಟೋರಿಯಸ್ ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್ - undefined
ಅವಳಿ ನಗರದಲ್ಲಿಂದು ಪೊಲೀಸರು ಬೆಳ್ಳಂಬೆಳಗ್ಗೆಯೇ ರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ರೌಡಿಗಳ ಮನೆಯಲ್ಲಿದ್ದ ಮಚ್ಚು, ಲಾಂಗು ಮತ್ತಿತರ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ.
![ಬಾಲ ಬಿಚ್ಚಿದ್ರೆ ಹುಷಾರ್... ನಟೋರಿಯಸ್ ರೌಡಿಗಳಿಗೆ ಖಾಕಿ ಖಡಕ್ ವಾರ್ನಿಂಗ್](https://etvbharatimages.akamaized.net/etvbharat/prod-images/768-512-3666458-thumbnail-3x2-chai.jpg)
ಒಂದು ಕಡೆ ಹುಬ್ಬಳ್ಳಿ ಪೊಲೀಸರಿಗೆ ತಲೆನೋವಾಗಿದ್ದ ನಟೋರಿಯಸ್ ರೌಡಿಶೀಟರ್ ವಿಜಯ ಬಿಜವಾಡ್ ಹಾಗೂ ಆತನ ಸಹಚರರನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದರೆ, ಮತ್ತೊಂದೆಡೆ, ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆ, ಬೆಳ್ಳಂಬೆಳಗ್ಗೆ ರೌಡಿಗಳಿಗೆ ಮೈಚಳಿ ಬಿಡಿಸಿದ್ದಾರೆ.
ನಟೋರಿಯಸ್ ರೌಡಿಗಳ ಮನೆ ಮೇಲೆ ದಾಳಿ ಮಾಡಿ, ಮನೆಯಲ್ಲಿದ್ದ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ. ನಗರದ ಸೆಟ್ಲಮೆಂಟ್ ಪ್ರದೇಶದಲ್ಲಿ ರೌಡಿಗಳ ಮನೆ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆ ಸಿಪಿಐ ಸಂತೋಷಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿ ರೌಡಿ ಶೀಟರ್ ಶ್ಯಾಮ್ ಜಾಧವ್, ಶಶಿ ಬಿಜವಾಡ್, ಗೋಕಾಕ್ ಗ್ಯಾಂಗ್ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ರೌಡಿಗಳ ಮನೆಯನ್ನ ತಪಾಸಣೆ ನಡೆಸಲಾಯಿತು. ಅಲ್ಲದೆ, ಬಾಲ ಬಿಚ್ಚದಂತೆ ಖಡಕ್ ವಾರ್ನಿಂಗ್ ನೀಡಿ, ಅಪರಾಧಿ ಚಟುವಟಿಕೆಯಲ್ಲಿ ತೊಡಗಿದ್ರೆ ಗಡಿ ಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.