ಧಾರವಾಡ: ಬಳ್ಳಾರಿಯಿಂದ ಧಾರವಾಡದ ಕೋರ್ಟ್ಗೆಂದು ಬಂದಿದ್ದ ಭೂಗತ ಪಾತಕಿ ಬಚ್ಚಾಖಾನ್ ಮೇಲೆ ಪೊಲೀಸ್ ದಾಳಿ ಮಾಡಿದ್ದು, ಈ ವೇಳೆ ಆತ ತನ್ನ ಪ್ರೇಯಸಿಯೊಂದಿಗೆ ಸರಸದಲ್ಲಿ ತೊಡಗಿದ್ದ ಎಂಬ ಅಂಶ ಬಯಲಾಗಿದೆ. ಈ ಮೂಲಕ ವಿಚಾರಣೆಗೆ ಬಂದ ಆರೋಪಿಗೆ ಪೊಲೀಸರು ಆತಿಥ್ಯ ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ಧಾರವಾಡದ ಕೋರ್ಟ್ಗೆ ಬಚ್ಚಾಖಾನ್ ಬಳ್ಳಾರಿ ಪೊಲೀಸರೊಂದಿಗೆ ಬಂದಿದ್ದರು ಎನ್ನಲಾಗ್ತಿದೆ. ಆದರೆ, ರಾಯಾಪುರದ ಬಳಿಯಿರುವ ಖಾಸಗಿ ಲಾಡ್ಜ್ನಲ್ಲಿ ಮೊದಲೇ ಬಂದು ಆತನ ಪ್ರೇಯಸಿ ಕಾಯುತ್ತಿದ್ದರು. ಪ್ರೇಯಸಿಯೊಂದಿಗೆ ಸರಸಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.