ಹುಬ್ಬಳ್ಳಿ : ಹೋಳಿ ಹಬ್ಬದಲ್ಲಿ ಅಬ್ಬರದ ಡಿಜೆ ಸದ್ದಿಗೆ ಹು-ಧಾ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ಹುಬ್ಬಳ್ಳಿ... ಹೋಳಿ ಹಬ್ಬದಲ್ಲಿ ಅಬ್ಬರದ ಡಿಜೆ ಸೌಂಡ್ಗೆ ಪೊಲೀಸ್ ಇಲಾಖೆ ಬ್ರೇಕ್
ಹೋಳಿ ಹಬ್ಬ ಆಚರಣೆ ವೇಳೆ ಅಬ್ಬರದ ಡಿಜೆ ಸದ್ದಿಗೆ ಹು-ಧಾ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇಂದಿನಿಂದ ಮಾ.13ರ ವರೆಗೆ ನಡೆಯಲಿರುವ ಹೋಳಿ ಹಬ್ಬದ ಪ್ರಯುಕ್ತವಾಗಿ ಡಿಜೆ ಧ್ವನಿವರ್ಧಕಗಳಿಗೆ ನಿರ್ಬಂಧ ಹಾಕುವ ಮೂಲಕ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಖಡಕ್ ಎಚ್ಚರಿಕೆ ನೀಡಿದೆ.
ಹು-ಧಾ ಮಹಾನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದ ಮಾಲಿನ್ಯ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ನಗರದಲ್ಲಿ ವೃದ್ಧರು ಹಾಗೂ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಬ್ಬರದ ಧ್ವನಿವರ್ಧಕಗಳಿಗೆ ಕಡಿವಾಣ ಹಾಕಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.