ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ - marijuana sales case of hubli

ಹುಬ್ಬಳ್ಳಿ ನಗರದ ರಾಮನಗರ ಶಾಲೆಯೊಂದರ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಅರ್ಧ ಕೆಜಿ ಗಾಂಜಾ ಮತ್ತು ಎರಡು ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

Police findout the marijuana sales case
ಗಾಂಜಾ ಮಾರಾಟ ಪ್ರಕರಣ ಭೇದಿಸಿದ ಪೊಲೀಸರು

By

Published : Mar 17, 2021, 3:34 PM IST

ಹುಬ್ಬಳ್ಳಿ:ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಆರ್ಥಿಕ ಮಾದಕ ವಸ್ತುಗಳ ಅಪರಾಧ ಪೊಲೀಸರು ಪತ್ತೆ ಹಚ್ಚಿ, ಕಾರ್ಯಾಚರಣೆ ನಡೆಸಿ ಇಬ್ಬರು ಗಾಂಜಾ ಮಾರಾಟಗಾರರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ರಾಮನಗರ ಶಾಲೆಯೊಂದರ ಮುಂದೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಜಾಲ ಭೇದಿಸಿದ್ದಾರೆ. ಅರ್ಧ ಕೆಜಿ ಗಾಂಜಾ ಮತ್ತು ಎರಡು ಮೊಬೈಲ್​ಗಳನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ:ಹರಿಜನ ಸರ್ಕಾರಿ ಶಾಲೆಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ತಂಡದ ಭೇಟಿ:ನೆರವು

ಹರೀಶ್ ಚಂದ್ರಶೇಖರ್ ಚಲವಾದಿ ಮತ್ತು ನಿಖಿಲ್ ಪತಿಕೊಂಡ ಬಂಧಿತ ಆರೋಪಿಗಳು. ಇಬ್ಬರು ಹುಬ್ಬಳ್ಳಿಯ ನಿವಾಸಿಗಳಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ABOUT THE AUTHOR

...view details