ಹುಬ್ಬಳ್ಳಿ :ಗೌರಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆ ಪಥ ಸಂಚಲನ ಹಮ್ಮಿಕೊಂಡಿತ್ತು.
ಸುವ್ಯವಸ್ಥಿತ ಹಬ್ಬ ಆಚರಣೆ ಹಿನ್ನೆಲೆ: ಹುಬ್ಬಳ್ಳಿ ಪೊಲೀಸರಿಂದ ಪಥ ಸಂಚಲನ - ಪೊಲೀಸ್ ಸಿಬ್ಬಂದಿ
ಗೌರಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆ ಪಥ ಸಂಚಲನ ಹಮ್ಮಿಕೊಂಡಿತ್ತು. ಇನ್ನೂ ಈ ಪಥ ಸಂಚಲನದಲ್ಲಿ ಅರೆ ಸೇನಾ ಹಾಗೂ ಸಿಆರ್‌ಪಿಎಫ್ ಪಡೆಗಳು ಹಾಗೂ ಸಿವಿಲ್ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ನಗರದ ರೈಲು ನಿಲ್ದಾಣದಿಂದ ಆರಂಭವಾದ ಪಥ ಸಂಚಲನ ಗೂಡ್ ಶೆಡ್ ರೋಡ್, ಪೀಶ್ ಮಾರ್ಕೆಟ್, ಗಣೇಶ ಪೇಟೆ ಕ್ರಾಸ್, ಮರಾಠಗಳಲ್ಲಿ, ಶಿವಾಜಿ ಸರ್ಕಲ್ , ದುರ್ಗದ ಬೈಲ್, ಶಾ ಬಜಾರ, ಮಂಗಳವಾರ ಪೇಟೆ ಕ್ರಾಸ್, ಜೋಡೆನತ್ತಿನಮಠ, ಕೆಬಿ ನಗರ ಸೆಟ್ಲಮೆಂಟ್, ಯಂಗ್ ಸ್ಟಾರ್ ಕ್ಲಬ್ಗೆ ಮುಕ್ತಾಯಗೊಂಡಿತು.
ನಗರದ ಜನತೆ ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಆಚರಣೆ ಮಾಡುವ ಸಲುವಾಗಿ ಪಥಸಂಚಲನ ಹಮ್ಮಿಕೊಂಡಿದ್ದು, ನಗರದ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಾಗಿ ಬಂದಿತು. ಇನ್ನೂ ಪಥ ಸಂಚಲನದಲ್ಲಿ ಕೇಂದ್ರದಿಂದ ಆಗಮಿಸಿದ ಅರೆ ಸೇನೆ ಹಾಗೂ ಸಿಆರ್‌ಪಿಎಫ್ ಪಡೆಗಳು ಹಾಗೂ ಸಿವಿಲ್ ಪೊಲೀಸ್ ಸಿಬ್ಬಂದಿ ಭಾಗಿಯಾಗಿತ್ತು