ಕರ್ನಾಟಕ

karnataka

ETV Bharat / state

ಗೌರಿ ಲಂಕೇಶ್ ಹತ್ಯೆ ಕೇಸ್‌.. ಎಸ್​ಐಟಿಗೆ ಸುಳಿವು ನೀಡಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಬಹುಮಾನ! - ಗೌರಿ ಲಂಕೇಶ್​ರವರ ಹತ್ಯೆ ಪ್ರಕರಣ

ಗೌರಿ ಲಂಕೇಶ್​ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಬಿಡಿಡಿಎಸ್ ತಂಡದ 8 ಜನ ಸಿಬ್ಬಂದಿಗಳಾದ ಆರ್ ಎಫ್ ಮುಂತೇಶ, ಸಿ ಬಿ ಜಗದ, ಎನ್ ಜಿ ತೋಪಲಕಟ್ಟಿ, ಎನ್ ಎಸ್‌ ಇಂಗಳಗಿ, ಡಿ ವಾಯ್‌ ಭೋವಿ, ಎಮ್ ಪಿ ಔದಕ್ಕನವರ, ಎಮ್ ಆರ್‌ ಮಹಳ್ಳಿ ಹಾಗೂ ಎಮ್ ಕೆ ಕೋನಿ ಇವರಲ್ಲರಿಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರು ಪ್ರಶಂಸನಾ ಪತ್ರ ಮತ್ತು ಬಹುಮಾನ ಘೋಷಣೆ ಮಾಡಿದ್ದಾರೆ.

Gauri Lankesh case
ಗೌರಿ ಲಂಕೇಶ್​ರವರ ಹತ್ಯೆ ಪ್ರಕರ

By

Published : Jan 6, 2020, 1:56 PM IST

ಹುಬ್ಬಳ್ಳಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್​ ಅವರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ರಾಜ್ಯದ ಎಸ್​ಐಟಿ ತಂಡಕ್ಕೆ ಸಹಕಾರವನ್ನು ನೀಡಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ಬಿಡಿಡಿಎಸ್(ಸ್ಫೋಟಕ ಪತ್ತೆ ಮತ್ತು ನಿಷ್ಕ್ರಿಯ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.

ಗೌರಿ ಲಂಕೇಶ್​ ಕೊಲೆ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಬಿಡಿಡಿಎಸ್ ತಂಡದ 8 ಜನ ಸಿಬ್ಬಂದಿಗಳಾದ ಆರ್ ಎಫ್ ಮುಂತೇಶ, ಸಿ ಬಿ ಜಗದ, ಎನ್ ಜಿ ತೋಪಲಕಟ್ಟಿ, ಎನ್ ಎಸ್‌ ಇಂಗಳಗಿ, ಡಿ ವಾಯ್‌ ಭೋವಿ, ಎಮ್ ಪಿ ಔದಕ್ಕನವರ, ಎಮ್ ಆರ್‌ ಮಹಳ್ಳಿ ಹಾಗೂ ಎಮ್ ಕೆ ಕೋನಿ ಇವರಲ್ಲರಿಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರು ಪ್ರಶಂಸನಾ ಪತ್ರ ಮತ್ತು ಬಹುಮಾನ ಘೋಷಣೆ ಮಾಡಿದ್ದಾರೆ.

ಸಿಎಆರ್ ಸಿಬ್ಬಂದಿ ಕಾರ್ಯ ವೈಖರಿ ಮೆಚ್ಚಿ, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಬೆಂಗಳೂರು ಪೊಲೀಸ್​ ಮಹಾ ನಿರೀಕ್ಷಕರು ಪ್ರಶಂಸನಾ ಪತ್ರಗಳನ್ನು ನೀಡಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರು ಸಹ ಇವರ ಕಾರ್ಯ ಶ್ಲಾಘಿಸಿ, ಸೂಕ್ತ ಬಹುಮಾನವನ್ನು ಘೋಷಿಸಿ, ಪ್ರಶಂಸನಾ ಪತ್ರಗಳನ್ನು ವಾರದ ಕವಾಯತಿನಲ್ಲಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details