ಹುಬ್ಬಳ್ಳಿ:ಒಂದೆಡೆ ರಾಜ್ಯದಲ್ಲಿ ಪೊಲೀಸರ ಲಾಠಿ ಏಟಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನೊಂದೆಡೆ ಪೊಲೀಸರು ತಮ್ಮ ಕರ್ತವ್ಯದ ನಡುವೆ ಗಾಯಗೊಂಡ ನಾಯಿ ಮರಿಯ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಗಾಯಗೊಂಡ ನಾಯಿ ಮರಿ ಆರೈಕೆ ಮಾಡಿ ಮಾನವೀಯತೆ ಮೆರೆದ ಕಾನ್ಸ್ಸ್ಟೇಬಲ್ ಹುಬ್ಬಳ್ಳಿಯ ಪರಾಗ ಹೋಟೆಲ್ ಬಳಿ ಬೈಕ್ ಸವಾರನೊಬ್ಬ ನಾಯಿ ಮರಿಯ ಮೇಲೆ ಬೈಕ್ ಹತ್ತಿಸಿಕೊಂಡು ಹೋಗಿದ್ದ. ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಶಹರ ಠಾಣೆಯ ಪೊಲೀಸ್ ಕೃಷ್ಣಾ ಕಟ್ಟಿಮನಿ ಹಾಗೂ ದಕ್ಷಿಣ ಸಂಚಾರಿ ಠಾಣೆಯ ಪೊಲೀಸ್ ದ್ಯಾಮಣ್ಣ ಎಂಕನ್ನವರ ನಾಯಿ ಮರಿಗೆ ನೀರು ಕುಡಿಸಿ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಪೊಲೀಸರ ಆರೈಕೆ ನಂತರ ಚೇತರಿಸಿಕೊಂಡ ನಾಯಿ ಮರಿ ತನ್ನ ತಾಯಿಯ ಬಳಿ ತೇವಳುತ್ತಾ ಸಾಗಿದೆ. ತನ್ನ ಕಂದನನ್ನು ರಕ್ಷಣೆ ಮಾಡಿದ ಪೊಲೀಸರಿಗೆ ತಾಯಿ ನಾಯಿ ಧನ್ಯವಾದಗಳನ್ನು ಹೇಳುವ ರೀತಿಯಲ್ಲಿ ಪೊಲೀಸರನ್ನೇ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಲಾಠಿ ಹಿಡಿದು ವಾಹನ ಸಂಚಾರ ತಡೆಗಟ್ಟುತ್ತಿರುವ ಪೊಲೀಸ್ ಸಿಬ್ಬಂದಿ:
ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ವಾಹನಗಳ ಸಂಚಾರ ತಡೆಗಟ್ಟುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ಸಿಬ್ಬಂದಿ ಲಾಠಿ ಬಳಸದಂತೆ ಆದೇಶ ನೀಡಲಾಗಿದೆ. ಆದರೂ ಸಹ ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿ ಲಾಠಿ ಹಿಡಿದು ವಾಹನ ತಡೆಗಟ್ಟುವ ದೃಶ್ಯ ಕಂಡು ಬಂದಿದೆ. ಪೊಲೀಸ್ ಸಿಬ್ಬಂದಿ ಲಾಠಿ ಹಿಡಿದು ವಾಹನ ತಡೆಗಟ್ಟುತ್ತಿದ್ದು, ಬೈಕ್ ಸವಾರರ ಮುಖದಲ್ಲಿ ಆತಂಕ ಮೂಡಿದೆ. ಆದ್ದರಿಂದ ಪೊಲೀಸ್ ಇಲಾಖೆ ಲಾಠಿ ಬಳಸದೆ ಸಾರ್ವಜನಿಕರಿಗೆ ತಿಳಿಹೇಳುವ ಕೆಲಸ ಮಾಡಬೇಕಿದೆ.
ಲಾಠಿ ಹಿಡಿದು ವಾಹನ ಸಂಚಾರ ತಡೆಗಟ್ಟುತ್ತಿರುವ ಪೊಲೀಸ್ ಸಿಬ್ಬಂದಿ ಸಸಿ, ಉಪಹಾರ ನೀಡಿ ದಾದಿಯರ ದಿನ ಆಚರಿಸಿದ ಯುವಕರು:
ಕೋವಿಡ್ ವಿರುದ್ಧ ಫ್ರಂಟ್ ಲೈನ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ಗಳಿಗೆ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ಯುವಕರ ತಂಡವೊಂದು ನಗರದ ಚಿಟ್ಟಗುಬ್ಬಿ ಆಸ್ಪತ್ರೆಯಲ್ಲಿ ನಿರಂತರವಾಗಿ ರೋಗಿಗಳ ಸೇವೆ ಮಾಡುತ್ತಿರುವ ನರ್ಸ್ಗಳಿಗೆ ಸಸಿ ಮತ್ತು ಉಪಹಾರ ನೀಡಲಾಯಿತು.
ಸಸಿ, ಉಪಹಾರ ನೀಡಿ ದಾದಿಯರ ದಿನ ಆಚರಿಸಿದ ಯುವಕರು ತಮ್ಮ ಕುಟುಂಬ ಬಿಟ್ಟು, ಜೊತೆಗೆ ಪಿಪಿಇ ಕಿಟ್ ಹಾಕಿಕೊಂಡು ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಇವರ ಕಾರ್ಯ ಎಲ್ಲರೂ ಮೆಚ್ಚುವ ಸಂಗತಿ ಎಂದು ನಗರದ ಮಂಜುನಾಥ ಗೆಳೆಯರ ಬಳಗದ ವತಿಯಿಂದ ಸಸಿ ಮತ್ತು ಉಪಹಾರ ನೀಡಿ ಸತ್ಕರಿಸಿದರು.