ಧಾರವಾಡ:ಪೊಲೀಸರು ಮತ್ತು ವಕೀಲರೊಬ್ಬರ ನಡುವೆ ಠಾಣೆಯಲ್ಲಿ ವಾಗ್ವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
ವಕೀಲರೊಂದಿಗೆ ವಾಗ್ವಾದ: ಪೊಲೀಸ್ ಪೇದೆ ಅಮಾನತುಗೊಳಿಸಿ ಎಸ್ಪಿ ಆದೇಶ - ಧಾರವಾಡದಲ್ಲಿ ಪೇದೆ ಅಮಾನತು
ಪೊಲೀಸರು ಮತ್ತು ವಕೀಲರೊಬ್ಬರ ನಡುವೆ ಠಾಣೆಯಲ್ಲಿ ನಡೆದ ವಾಗ್ವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
ಪೇದೆಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಆದೇಶ ಹೊರಡಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೇದೆಯಾಗಿರುವ ಗಣೇಶ ಕಾಂಬಳೆ ಅಮಾನತುಗೊಂಡವರು.
ನಿನ್ನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಕೀಲರೊಂದಿಗೆ ವಾಗ್ವಾದ ನಡೆದಿತ್ತು. ಗ್ರಾಮೀಣ ಪೊಲೀಸ್ ಠಾಣೆಯ ಪೇದೆಯಿಂದ ಸರ್ಕಾರಿ ವಕೀಲರ ಮೇಲೆ ದಬ್ಬಾಳಿಕೆ ಆರೋಪ ಕೇಳಿ ಬಂದಿತ್ತು. ಸರ್ಕಾರಿ ವಕೀಲ ಸುನೀಲ ಗುಡಿ ಧಾರವಾಡ ಪೊಲೀಸ್ ಠಾಣೆಗೆ ದೂರು ವಿಚಾರಣೆಗೆ ಬಂದಾಗ ವಾಗ್ವಾದ ನಡೆದಿತ್ತು. ಪ್ರಕರಣದ ಎಲ್ಲ ಮಾಹಿತಿಯನ್ನು ಡಿಎಸ್ಪಿ ಅವರಿಂದ ಪಡೆದುಕೊಂಡು ಎಸ್ಪಿಯವರು ಪೇದೆಯನ್ನು ಅಮಾನತು ಮಾಡಿದ್ದಾರೆ.