ಹುಬ್ಬಳ್ಳಿ :ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ ರಾಜ್ಯದ ಇತರೇ ಕಮಿಷನರೇಟ್ಗಳಿಗೆ ಮಾದರಿಯಾಗುವಂತೆ ಪೊಲೀಸ್ ಆಯುಕ್ತ ಲಾಬೂರಾಮ್ ಯೋಜನೆ ರೂಪಿಸುವುದರ ಜೊತೆಗೆ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಇತ್ತೀಚೆಗೆ ಅವಳಿ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ವಾರದ ರಜೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿ, ಸಿಬ್ಬಂದಿಗೆ ಹೊಸ ವರ್ಷದ ಗಿಫ್ಟ್ ನೀಡಿದ ಕಮಿಷನರ್ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಓದಿ: ವಾಯುಸೇನೆಯಲ್ಲೂ ಮುಧೋಳ ಶ್ವಾನಗಳಿಗೆ ಬೇಡಿಕೆ
ಅವಳಿ ನಗರದ ವ್ಯಾಪ್ತಿಯಲ್ಲಿ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಸಿಬ್ಬಂದಿ ವರ್ಗಾವಣೆಗೆ ಸಾಕಷ್ಟು ಪರದಾಟ ನಡೆಸಬೇಕಾಗಿತ್ತು. ಕೆಲವರು ರಾಜಕೀಯ ಒತ್ತಡ ತಂದು ತಮಗೆ ಇಷ್ಟದ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಯೇ ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳುವ ಆರೋಪಗಳು ಕೇಳಿ ಬಂದಿದ್ದವು.
ಆದರೆ, ಕಮಿಷನರ್ ಲಾಬೂರಾಮ್ ಅವರು ಇದಕ್ಕೆ ಇತಿಶ್ರೀ ಹಾಡಿದ್ದಾರೆ. ಪದೋನ್ನತಿ ಹೊಂದಿದಂತಹ ಸಿಬ್ಬಂದಿಗೆ ಕೌನ್ಸೆಲಿಂಗ್ ಮುಖಾಂತರ ಅವರ ಕೋರಿಕೆಯಂತೆ ಪೊಲೀಸ್ ಠಾಣೆ ಹಂಚಿಕೆ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಇನ್ನು ಮುಂದೆಯೂ ಕೂಡ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿಕೊಂಡು ಹೋಗುವಂತೆ ಸೂಚಿಸಿದರು. ಇದು ಪೊಲೀಸರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.