ಹುಬ್ಬಳ್ಳಿ: ಹು-ಧಾ ಮಹಾನಗರಕ್ಕೆ ನೂತನ ಪೊಲೀಸ್ ಕಮೀಷನರ್ ಆಗಿ ಆಗಮಿಸಿದ್ದ ಲಾಬುರಾಮ್ ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯದಲ್ಲಿ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕರ್ತವ್ಯಕ್ಕೆ ಹಾಜರಾದ ಐಪಿಎಸ್ ಅಧಿಕಾರಿ ಲಾಬುರಾಮ್ - Commissioner of Police Laburam
ಅವಳಿನಗರದ ಕ್ರೈಂಗಳಿಗೆ ಕಡಿವಾಣ ಹಾಕಿದ್ದ ಖಡಕ್ ಐಪಿಎಸ್ ಅಧಿಕಾರಿ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದಾರೆ.
ಪೊಲೀಸ್ ಆಯುಕ್ತ ಲಾಬುರಾಮ್
ಅವಳಿನಗರದ ಕ್ರೈಂಗಳಿಗೆ ಕಡಿವಾಣ ಹಾಕಿದ್ದ ಖಡಕ್ ಐಪಿಎಸ್ ಅಧಿಕಾರಿ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಸಂಪೂರ್ಣ ಗುಣಮುಖರಾಗಿ ಈಗ ಕರ್ತವ್ಯಕ್ಕೆ ಮರಳಿದ್ದಾರೆ.
ಪೊಲೀಸ್ ಆಯುಕ್ತ ಲಾಬುರಾಮ್ ಅವರು ಆಗಮಿಸುತ್ತಿದ್ದಂತೆಯೇ ಹು-ಧಾ ಮಹಾನಗರ ಕ್ರೈಂಗಳಿಗೆ ಕಡಿವಾಣ ಹಾಕಿದ್ದರು. ಆದರೆ, ಅವರು ಆಸ್ಪತ್ರೆ ಸೇರುತ್ತಿದ್ದಂತೆಯೇ ಕ್ರೈಂ ಸಂಖ್ಯೆ ಕೂಡ ಹೆಚ್ಚಾಗಿದ್ದವು. ಇದೀಗ ಪುನಃ ಎಂಟ್ರಿ ಕೊಟ್ಟಿದ್ದು, ಕ್ರೈಂಗಳಿಗೆ ಕಡಿವಾಣ ಬೀಳಲಿದೆ ಎಂಬುದು ನಾಗರಿಕರ ವಿಶ್ವಾಸವಾಗಿದೆ.