ಧಾರವಾಡ: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಿ ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ನೀಡಲು ಸದಾ ಶ್ರಮಿಸುವ ಪೊಲೀಸ್ ವ್ಯವಸ್ಥೆ ತ್ಯಾಗ, ಬಲಿದಾನದ ಪ್ರತೀಕವಾಗಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಬಿ. ಚಟ್ಟಿ ಹೇಳಿದರು.
ಪೊಲೀಸ್ ವ್ಯವಸ್ಥೆ ತ್ಯಾಗ, ಬಲಿದಾನದ ಪ್ರತೀಕ: ಕೃಷಿ ವಿವಿ ಕುಲಪತಿ ಪ್ರೊ. ಚೆಟ್ಟಿ
ಧಾರವಾಡದಲ್ಲಿ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು. ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ಕೊರೊನಾ ವಾರಿಯರ್ಸ್‍ಗಳಾಗಿ ಪೊಲೀಸರು ದುಡಿಯುತ್ತಿದ್ದಾರೆ. ಸಮಾಜ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಎಂದು ಪ್ರೊ.ಎಂ.ಬಿ. ಚಟ್ಟಿ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸ್ ಸಿಬ್ಬಂದಿ ವೈಯಕ್ತಿಕ ಬದುಕು ಕುಟುಂಬ ಹಿತ ಬದಿಗಿಟ್ಟು, ಸಮಾಜದ ಸ್ವಾಸ್ಥ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಧೈರ್ಯ, ಸಾಹಸಗಳಿಂದ ಅಪರಾಧ ಮುಕ್ತ ಸಮಾಜ ಮುಕ್ತಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೊ. ಚಟ್ಟಿ ತಿಳಿಸಿದರು.
ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ಕೊರೊನಾ ವಾರಿಯರ್ಸ್‍ಗಳಾಗಿ ಪೊಲೀಸರು ದುಡಿಯುತ್ತಿದ್ದಾರೆ. ಸಾರ್ವಜನಿಕರ ಹಿತ ಕಾಪಾಡಲು ಸದಾಕಾಲ ದುಡಿಯುತ್ತಾರೆ. ಸಮಾಜ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಸರ್ಕಾರ ಪೊಲೀಸ್ ಇಲಾಖೆ ಸಿಬ್ಬಂದಿಗೆ ಇನ್ನು ಹೆಚ್ಚಿನ ಸೌಕರ್ಯ ಸವಲತ್ತು ನೀಡಬೇಕು ಎಂದರು.
ಧಾರವಾಡ ಎಎಸ್‍ಐಎಸ್‍ಎಫ್ ಕಮಾಂಡೆಂಟ್ ವಿ. ಫೈಜುದ್ದೀನ್ ಅತಿಥಿಯಾಗಿ ಆಗಮಿಸಿದ್ದರು. ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ (ಇದೀಗ ನಿರ್ಗಮಿತ ಎಸ್ಪಿ) ವರ್ತಿಕಾ ಕಟಿಯಾರ್ ಅವರು ಕಳೆದ ಸಾಲಿನಲ್ಲಿ ದೇಶ ಹಾಗೂ ಸಮಾಜದ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡ ದೇಶದ 259 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಹೆಸರು ಸ್ಮರಿಸಿ, ಗೌರವ ಸಲ್ಲಿಸಿದರು.