ಕರ್ನಾಟಕ

karnataka

ETV Bharat / state

ಬಿಡಾಡಿ ಜಾನುವಾರುಗಳ ಪಾಲಾಯ್ತು ಪೊಲೀಸ್​​ ಚೆಕ್​​ಪೋಸ್ಟ್​​​​ - Police check posts

ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವ ಉದ್ದೇಶದಿಂದ ಪೊಲೀಸರಿಗೆ ಸಹಾಯಕವಾಗುವಂತೆ ಚೆಕ್‌ಪೋಸ್ಟ್​​​​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವುದು ಅಷ್ಟೇ ಮುಖ್ಯ. ಆದರೆ ಇದೀಗ ಅವಳಿ ನಗರದಲ್ಲಿನ ಚೆಕ್​​ಪೋಸ್ಟ್​​ಗಳು ಬಿಡಾಡಿ ಜಾನುವಾರುಗಳಿಗೆ ಆಶ್ರಯದ ತಾಣವಾಗಿದ್ದು, ಪೊಲೀಸ್ ಇಲಾಖೆಯ ಸ್ಥಿತಿಯನ್ನು ಅಣಕಿಸುವಂತಿದೆ.

ಬಿಡಾಡಿ ಜಾನುವಾರುಗಳ ಪಾಲಾಯ್ತು ಪೊಲೀಸ್ ಚೆಕ್ ಪೋಸ್ಟ್ ಗಳು

By

Published : Jul 30, 2019, 9:05 AM IST

ಹುಬ್ಬಳ್ಳಿ: ಅವಳಿ ನಗರದಲ್ಲಿನ ಅತೀ ಸೂಕ್ಷ್ಮ ‌ಪ್ರದೇಶದಲ್ಲಿ ಪೊಲೀಸ್ ಇಲಾಖೆ ಚೆಕ್‌ಪೋಸ್ಟ್​ಗಳನ್ನು ತೆರೆದಿದೆ. ಆದ್ರೆ ಇದೀಗ ಈ ಚೆಕ್​​ಪೋಸ್ಟ್​​ಗಳು ಬಿಡಾಡಿ ಜಾನುವಾರುಗಳಿಗೆ ಆಶ್ರಯದ ತಾಣವಾಗಿವೆ.

ಬಿಡಾಡಿ ಜಾನುವಾರುಗಳ ಪಾಲಾಯ್ತು ಪೊಲೀಸ್ ಚೆಕ್ ಪೋಸ್ಟ್ ಗಳು

ಹೌದು. ಹು-ಧಾ ಕಮೀಷನರೇಟ್​​ ಅಡಿಯ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ "ಬಂಕಾಪೂರ ಚೌಕ್" ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಘಂಟಿಕೇರಿಯ ಇಂದಿರಾ ನಗರ ಸೂಕ್ಷ್ಮ ಪ್ರದೇಶವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವ ಉದ್ದೇಶದಿಂದ ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲೆಂದು ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಈ ಚೆಕ್​​ಪೋಸ್ಟ್ ಇಂದು ಬಿಡಾಡಿ ದನಗಳಿಗೆ ನೆಲೆಯಾಗಿದೆ. ಜನರಿಗೆ ಸೂಕ್ತ ರಕ್ಷಣೆ ಒದಗಿಸುವ ಸದುದ್ದೇಶದಿಂದ ಹಾಗೂ ಹುಬ್ಬಳ್ಳಿಯ ನಗರದ ಪ್ರವೇಶ ಮಾರ್ಗದಲ್ಲಿ ನಿರ್ಮಿಸಿದ್ದ ಈ ಚೆಕ್​​ಪೋಸ್ಟ್ ಸ್ಥಿತಿ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ನಿರ್ಲಕ್ಷ್ಯವನ್ನು ಅಣಕಿಸುವಂತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details