ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು - ಡಿಸಿಪಿ ಡಿ.ಎಲ್. ನಾಗೇಶ್​​​

ಅವಳಿ ನಗರದಲ್ಲಿ ಇತ್ತೀಚೆಗೆ ಚಾಕು ಇರಿತ, ಶೂಟೌಟ್​​ನಂತ ಪ್ರಕರಣಗಳು ಹೆಚ್ಚಾಗಿ ಜರುಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರೌಡಿಶೀಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಇಬ್ಬರು ರೌಡಿಶೀಟರ್​​​​​​​​​​​​​​​​ಗಳನ್ನು ಬಂಧಿಸಲಾಗಿದೆ.

ರೌಡಿಶೀಟರ್ ಮನೆಗಳ ಮೇಲೆ ದಾಳಿ

By

Published : Sep 24, 2019, 2:45 PM IST

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ, ಕಮರಿಪೇಟೆ, ಹಳೆ ಹುಬ್ಬಳ್ಳಿ, ಬೆಂಡಿಗೇರಿ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಡಿಸಿಪಿ ಡಿ.ಎಲ್. ನಾಗೇಶ್​​​ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ರೌಡಿಶೀಟರ್ ಮನೆಯನ್ನು ಶೋಧಿಸುತ್ತಿರುವ ಪೊಲೀಸರು

ಅವಳಿ ನಗರದಲ್ಲಿ ಇತ್ತೀಚೆಗೆ ಆಗಾಗ್ಗೆ ಚಾಕು ಇರಿತ ಪ್ರಕರಣಗಳು, ಶೂಟೌಟ್​ನಂತಹ ಘಟನೆಗಳು ನಡೆಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಈ ದಾಳಿ ನಡೆಸಲಾಗಿದೆ. ಕೇಶ್ವಾಪುರ ಪೊಲೀಸ್​​​ ಠಾಣಾ ವ್ಯಾಪ್ತಿಯ ರೌಡಿ ಶೀಟರ್​​​ ಮನೆಯಲ್ಲಿ ತಲ್ವಾರ್​​, ಡ್ಯ್ರಾಗನ್​, ಚೂರಿ ಹಾಗೂ ಇನ್ನಿತರ ಮಾರಕಾಸ್ತ್ರಗಳು ಪತ್ತೆಯಾಗಿವೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಅಪ್ತಾಫ್​​​ ಬೇಪಾರಿ ಹಾಗೂ ಶಿವ ಸುಬ್ರಹ್ಮಣ್ಯ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details