ಹುಬ್ಬಳ್ಳಿ:ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕಲಘಟಗಿ ಬಸವೇಶ್ವರನಗರದ ನಿವಾಸಿ ಜೈಲಾನಿ ಬಾಷಾಸಾಬ ಗಂಜಿಗಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 9 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್ - ಬೈಕ್ ಕಳ್ಳ ಬಂಧನ
ನಗರದ ವಿವಿಧೆಡೆ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದು, ಹಲವು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧಿನ
ಆರೋಪಿ ಹುಬ್ಬಳ್ಳಿಯಲ್ಲಿ 7 ಬೈಕ್ ಹಾಗೂ ಕಲಘಟಗಿಯಲ್ಲಿ 2 ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 9 ಬೈಕ್ಗಳ ಒಟ್ಟು ಮೌಲ್ಯ 2 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಬೈಕ್ ಕಳ್ಳತನದ ಬಗ್ಗೆ ಕಲಘಟಗಿಯ ಮಹ್ಮದ ರಫೀಕ ಮಕ್ತುಂಸಾಬ ಸನದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚಿದ್ದಾರೆ.
ಓದಿ:ಹುಬ್ಬಳ್ಳಿಯಲ್ಲಿ ಮಧ್ಯರಾತ್ರಿ ಹರಿದ ನೆತ್ತರು: ಯುವಕನ ಬರ್ಬರ ಕೊಲೆ