ಕರ್ನಾಟಕ

karnataka

ETV Bharat / state

ನಾಡೋಜ ಕಣವಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ: SDM ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ - Poet Kanavi health conditon was Serious

ಧಾರವಾಡದ ಹೊರವಲಯದಲ್ಲಿರುವ ಎಸ್.ಡಿ.ಎಂ ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ ನೀಡಿ, ಕವಿ ಡಾ. ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದರು. ಈಗ ಎರಡ್ಮೂರು ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕರು ಹೇಳಿದ್ದಾರೆ.

MLA Bellada visit to the SDM Hospital
ಎಸ್.ಡಿ.ಎಂ ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ

By

Published : Feb 15, 2022, 7:38 PM IST

Updated : Feb 15, 2022, 7:49 PM IST

ಧಾರವಾಡ:ನಾಡೋಜ ಚೆನ್ನವೀರ ಕಣವಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡದ ಎಸ್.ಡಿ.‌ಎಂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಧಾರವಾಡದ ಹೊರವಲಯದಲ್ಲಿರುವ ಎಸ್.ಡಿ.ಎಂ ಆಸ್ಪತ್ರೆಗೆ ಭೇಟಿ ನೀಡಿದ ಅವರು, ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಕವಿ ಡಾ. ಚೆನ್ನವೀರ ಕಣವಿ ಬೇಗ ಚೇತರಿಸಿಕೊಳ್ಳಲಿ ಎಂದು ಶಾಸಕ ಅರವಿಂದ ಬೆಲ್ಲದ ಆಶಯ ವ್ಯಕ್ತಪಡಿಸಿದರು.

ಎಸ್.ಡಿ.ಎಂ ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ

ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಣವಿ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಈಗ ಎರಡು - ಮೂರು ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿರುವುದು ಬೇಸರದ ಸಂಗತಿಯಾಗಿದೆ. ಓರ್ವ ಕವಿಯಾಗಿ ಯಾವುದೇ ದ್ವಂದ್ವ- ಗೊಂದಲಗಳಿಲ್ಲದೇ ಸ್ಪಷ್ಟ ವಿಚಾರಧಾರೆಗಳ ಜೊತೆ ಬದುಕು ಸಾಗಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯದಲ್ಲಿ ನಾಳೆಯಿಂದ ಪಿಯುಸಿ, ಪದವಿ ತರಗತಿಗಳು ಆರಂಭ

ಕಲ್ಯಾಣ ನಗರದಲ್ಲಿ ಕಣವಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ಅವರನ್ನು‌ ಚಿಕ್ಕಂದಿನಿಂದಲೇ ನೋಡುತ್ತ ಬೆಳೆದಿದ್ದೇನೆ. ನನ್ನ ತಂದೆ‌ ಚಂದ್ರಕಾಂತ ಬೆಲ್ಲದ ಅವರ ಜೊತೆ ನಿಕಟ ಸಂಬಂಧ ಹೊಂದಿದವರು. ಕವಿ ಮನಸು ಮಾತ್ರವಲ್ಲದೇ ಪ್ರತಿಯೊಬ್ಬರ ಹೃದಯದಲ್ಲಿ ಉಳಿಯುವ ವ್ಯಕ್ತಿತ್ವದವರು. ಇಂತಹ ಹಿರಿಯ ‌ಕವಿಗಳು ಇನ್ನಷ್ಟು ದಿನಗಳು‌ ನಮ್ಮೊಂದಿಗೆ ಇರಲಿ ಎಂಬ ಆಸೆ ಇದೆ. ಇದು ನಾಡಿನ ಎಲ್ಲರ ಆಸೆ ಕೂಡ ಆಗಿದೆ ಎಂದು ಬೆಲ್ಲದ ಹೇಳಿದರು.

Last Updated : Feb 15, 2022, 7:49 PM IST

ABOUT THE AUTHOR

...view details