ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭೂಪಾಲ್ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಕಾರ್ಯಕ್ರಮದ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದರೊಂದಿಗೆ ಇತರೆ ನಾಲ್ಕು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೂ ಚಾಲನೆ ನೀಡಲಿದ್ದಾರೆ.
ಧಾರವಾಡ ರೈಲು ನಿಲ್ದಾಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ಚಂದ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ವರ್ಚುಯಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 9.15ರ ಸುಮಾರಿಗೆ ನರೇಂದ್ರ ಮೋದಿ ವಂದೇ ಭಾರತ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ರೈಲು ವೇಳಾ ಪಟ್ಟಿ ದರದ ವಿವರ Vande Bharat Express Time Table ಬೆಂಗಳೂರು ಧಾರವಾಡ ವಂದೇ ಭಾರತ್ ರೈಲು ವೇಳಾಪಟ್ಟಿ : ಈ ರೈಲು ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನವೂ ಸಂಚಾರ ನಡೆಸಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ವಂದೇ ಭಾರತ ಎಕ್ಸ್ಪ್ರೆಸ್, 5.55ಕ್ಕೆ ಯಶವಂತಪುರ, 9.15 ಕ್ಕೆ ದಾವಣಗೆರೆ, 11.30ಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ (ಎಸ್‌ಎಸ್ಎಸ್) ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುವುದು.
ಧಾರವಾಡ ನಿಲ್ದಾಣದಿಂದಮಧ್ಯಾಹ್ನ 1.15 ಕ್ಕೆ ಹೊರಡುವ ಈ ರೈಲು, 1.35ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದ್ದು, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯ 6.15 ನಿಮಿಷ ಆಗಿರಲಿದೆ. ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಸದ್ಯ 8 ಬೋಗಿಗಳೊಂದಿಗೆ ಸಂಚಾರ ಮಾಡಲಿದೆ.
ಟಿಕೆಟ್ ದರದ ವಿವರ
- ಬೆಂಗಳೂರು to ಧಾರವಾಡಕ್ಕೆ Ac Chair Car ದರ ರೂ. 1165, ಎಕ್ಸಿಕ್ಯುಟೀವ್ ಕ್ಲಾಸ್ ದರ ರೂ. 2010 ಇರಲಿದೆ.
- ಬೆಂಗಳೂರು to ದಾವಣಗೆರೆ Ac Chair Car ದರ ರೂ. 915, ಎಕ್ಸಿಕ್ಯುಟೀವ್ ಕ್ಲಾಸ್ ದರ ರೂ.1740 ಇರಲಿದೆ.
- ಧಾರವಾಡ to ಬೆಂಗಳೂರು Ac Chair Car ದರ ರೂ. 1330, ಎಕ್ಸಿಕ್ಯುಟೀವ್ ಕ್ಲಾಸ್ ದರ ರೂ.2440 ಇರಲಿದೆ.
- ಧಾರವಾಡ to ಯಶವಂತಪುರ Ac Chair Car ದರ ರೂ. 1340, ಎಕ್ಸಿಕ್ಯುಟೀವ್ ಕ್ಲಾಸ್ ದರ ರೂ.2440 ಇರಲಿದೆ.
ಇತರೆ ನಾಲ್ಕು ವಂದೇ ಭಾರತ್ ರೈಲಿಗೂ ಚಾಲನೆ
- ರಾಣಿ ಕಮಲಾಪತಿ ರೈಲು ನಿಲ್ದಾಣ, ಭೂಪಾಲ್ to ಜಬಲ್ಪುರ್
- ಖಜೂರಾಹೊ-ಭೂಪಾಲ್-ಇಂದೋರ್
- ಮಡಗಾವ್, ಗೋವ to ಮುಂಬೈ
- ಹತಿಯಾ - ಪಾಟ್ನಾ ರೈಲುಗಳಿಗೂ ಇಂದು ಚಾಲನೆ ಸಿಗಲಿದೆ.
ಇದನ್ನೂ ಓದಿ:Vande Bharat train: ವಂದೇ ಭಾರತ್ ರೈಲು ಹುಬ್ಬಳ್ಳಿ ಆಗಮನಕ್ಕೆ ದಿನಗಣನೆ: ಎಸ್ಡಬ್ಲ್ಯೂಆರ್ ಕೈ ಸೇರದ ಅಧಿಕೃತ ಮಾಹಿತಿ