ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ಮುಕ್ತ ನಗರ ಜಾಗೃತಿ‌ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿ ದೀಪಾ ಚೋಳನ್ - ಹುಬ್ಬಳ್ಳಿ ಧಾರವಾಡ

ಹುಬ್ಬಳ್ಳಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ, ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ ನಗರ ಅಭಿಯಾನ ಜಾಗೃತಿ‌ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದರು.

ದೀಪಾ ಚೋಳನ್

By

Published : Sep 23, 2019, 10:51 PM IST

ಹುಬ್ಬಳ್ಳಿ :ಪ್ಲಾಸ್ಟಿಕ್ ನಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಅರಿವು ಪ್ರತಿಯೊಬ್ಬರಲ್ಲೂ ಇದೆ. ಪ್ಲಾಸ್ಟಿಕ್ ಬಳಕೆ ರೂಢಿಯನ್ನು ಸ್ವಪ್ರೇರಣೆಯಿಂದ ತ್ಯಜಿಸುವುದರ ಮೂಲಕ, ಪರಿಸರದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

ಪ್ಲಾಸ್ಟಿಕ್ ಮುಕ್ತ ನಗರ ಜಾಗೃತಿ‌ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿ ದೀಪಾ ಚೋಳನ್

ಹುಬ್ಬಳ್ಳಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ, ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ ನಗರ ಅಭಿಯಾನ ಜಾಗೃತಿ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯ ಹಾನಿ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹಲವು ವಿವಿಧ ಮಾಹಿತಿಗಳನ್ನು ದಿನನಿತ್ಯ ನೋಡುತ್ತೇವೆ. ನಿಷೇಧಿತ ಪ್ಲಾಸ್ಟಿಕ್ ನದಿ, ಸಾಗರ ಸೇರಿದಂತೆ ಎಲ್ಲಾ ನೀರಿನ ಆಕರಗಳನ್ನು ಸೇರಿ ಮಲಿನಗೊಳಿಸುತ್ತಿದೆ. ಇದರಿಂದಾಗಿ ಜಲಚರಗಳು ಅಳಿವಿನ ಅಂಚಿಗೆ ಬಂದಿವೆ. ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು ಆಹಾರವೆಂದು ಸೇವಿಸಿ ಕಷ್ಟ ಅನುಭವಿಸುತ್ತಿವೆ ಇದರಿಂದ ಎಚ್ಚೆತ್ತು ಪ್ಲಾಸ್ಟಿಕ್​ ಬಳಕೆಯನ್ನು ಕಡೆಮೆಗೊಳಿಸಬೇಕು ಎಂದರು.

ಸ್ವ ಪ್ರೇರಣೆಯಿಂದ ಜನರೇ ಪ್ಲಾಸ್ಟಿಕ್​ ಬಳಕೆಯನ್ನು ಕೈಬಿಡಬೇಕು. ಬೆಂಗಳೂರಿನಂತೆ ಹುಬ್ಬಳ್ಳಿ, ಧಾರವಾಡ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ಇಲ್ಲ. ಅಲ್ಲಿ ಪರಿಸರ ಬಹಳವಾಗಿ ಹಾನಿಯಾಗಿದೆ ಎಂದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಹಾಗೂ ತಯಾರಕರ ಮೇಲೆ‌ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು‌ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿದರೆ ಉತ್ಪಾದಕರು ತಮ್ಮ ಉತ್ಪಾದನೆಯನ್ನು ನಿಲ್ಲಿಸುತ್ತಾರೆ. ಮನೆಗಳಲ್ಲಿ ಕೂಡ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು ಎಲ್ಲರಿಗೂ ಮಾದರಿಯಾಗಿಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.

ABOUT THE AUTHOR

...view details