ಕರ್ನಾಟಕ

karnataka

By

Published : Apr 18, 2021, 5:23 PM IST

ETV Bharat / state

ರಾಜ್ಯದಲ್ಲಿಯೇ ಯಶಸ್ವಿ ಚಿಕಿತ್ಸೆ ಹೆಗ್ಗಳಿಕೆಗೆ ಪಾತ್ರವಾದ ಕಿಮ್ಸ್​ನಲ್ಲಿ ಮತ್ತೇ ಪ್ಲಾಸ್ಮಾ ಥೆರಪಿ ಆರಂಭ.!

ಕೊರೊನಾದಿಂದ ಗುಣಮುಖರಾಗಿ ರೋಗನಿರೋಧಕ ಶಕ್ತಿ ಬೆಳೆದವರಿಂದ 400 ಮಿ.ಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ತೀವ್ರ ತರಹದ ಸೋಂಕಿರುವವರಿಗೆ 200 ಎಂಎಲ್‌ ಪ್ಲಾಸ್ಮಾವನ್ನ ಮೊದಲ ಬಾರಿಗೆ ನೀಡಲಾಗುತ್ತೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್‌ ಕೊಡಲಾಗುತ್ತದೆ..

Plasma therapy in KIMS hubli news
ಕಿಮ್ಸ್​ನಲ್ಲಿ ಮತ್ತೇ ಪ್ಲಾಸ್ಮಾ ಥೆರಪಿ ಆರಂಭ

ಹುಬ್ಬಳ್ಳಿ :ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಮೂಲಕ ಹೆಸರು ಗಳಿಸಿದ್ದ ಕಿಮ್ಸ್ ಆಸ್ಪತ್ರೆ ಈಗ ಮತ್ತೆ ಕೊರೊನಾ ಎರಡನೇ ಅಲೆಯನ್ನು ಕಟ್ಟಿ ಹಾಕಲು ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಿದೆ.

ಕೋವಿಡ್‌ ಇಳಿಮುಖವಾಗಿದ್ದ ಪರಿಣಾಮ ಕಿಮ್ಸ್‌ನಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಮತ್ತೆ ಆರಂಭಿಸಲಾಗಿದೆ. 2ನೇ ಅಲೆಯಲ್ಲಿ ಕೊರೊನಾ ತಗುಲಿದ ಮೂವರಿಗೆ ಈಗಾಗಲೇ ಥೆರಪಿಯನ್ನು ಯಶಸ್ವಿಯಾಗಿ ನೀಡಲಾಗಿದೆ.

ಕಿಮ್ಸ್​ನಲ್ಲಿ ಮತ್ತೆ ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ..

ಐಸಿಎಂಆರ್‌ ಒಪ್ಪಿಗೆ ಪಡೆದು ಕಳೆದ ವರ್ಷ ಮೇ ತಿಂಗಳಲ್ಲಿ ಸೋಂಕಿನಿಂದ ಗುಣಮುಖರಾಗಿದ್ದ 64 ವರ್ಷದ ವೃದ್ಧನ (ಪಿ-363) ಮನವೊಲಿಸಿ ಪ್ಲಾಸ್ಮಾ ಪಡೆದು 65 ವರ್ಷದ ಸೋಂಕಿತನಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು.

ಕಳೆದ ವರ್ಷದ ಡಿಸೆಂಬರ್‌ ವೇಳೆಗೆ ಬರೋಬ್ಬರಿ 108 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಒದಗಿಸಲಾಗಿತ್ತು. ಅದಾದ ಬಳಿಕ ಕೊರೊನಾ ಗ್ರಾಫ್‌ ಇಳಿದ ಹಿನ್ನೆಲೆ ಫೆಬ್ರವರಿ ವೇಳೆಗೆ ಪ್ಲಾಸ್ಮಾ ಥೆರಪಿ ಬಹುತೇಕ ನಿಂತಿತ್ತು.

ಆದರೂ ಮುಂಜಾಗೃತಾ ಕ್ರಮವಾಗಿ ತಲಾ 200 ಎಂಎಲ್‌ನ 12 ಬಾಟಲ್‌ ಹಾಗೂ ಒಂದು 100 ಎಂಎಲ್‌ ಬಾಟಲ್‌ ಪ್ಲಾಸ್ಮಾ ಸದ್ಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಂಗ್ರಹಿಸಿಡಲಾಗಿದೆ. ಮತ್ತೆ ಇದೀಗ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಪರಿಣಾಮ ಕಿಮ್ಸ್‌ನಲ್ಲಿ ಕನಿಷ್ಠ 8ಕ್ಕಿಳಿದಿದ್ದ ರೋಗಿಗಳ ಸಂಖ್ಯೆ 80‌ಕ್ಕೂ ಅಧಿಕಗೊಂಡಿದೆ. ಸಂಗ್ರಹವಿರುವ ಪ್ಲಾಸ್ಮಾ ಬಳಕೆಯಾಗುತ್ತಿದೆ.

ಇದನ್ನೂ ಓದಿ:ಕಲ್ಯಾಣ ಮಂಟಪಗಳಲ್ಲಿ ಕೋವಿಡ್‌ ನಿಯಮ ಪಾಲಿಸಿ: ಸಚಿವ ಸುರೇಶ್ ಕುಮಾರ್

ಕೊರೊನಾದಿಂದ ಗುಣಮುಖರಾಗಿ ರೋಗನಿರೋಧಕ ಶಕ್ತಿ ಬೆಳೆದವರು ಮಾತ್ರ ಪ್ಲಾಸ್ಮಾ ದಾನ ಮಾಡಲು ಶಕ್ತರು. ಇಂಥವರಿಂದ 400 ಮಿ.ಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುವುಳ್ಳ ವ್ಯಕ್ತಿಗೆ 200 ಎಂಎಲ್‌ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್‌ ಕೊಡಲಾಗುತ್ತದೆ ಎಂದು ಕಿಮ್ಸ್ ನಿರ್ದೇಶಕರು ಮಾಹಿತಿ‌ ನೀಡಿದ್ದಾರೆ.

ABOUT THE AUTHOR

...view details