ಧಾರವಾಡ:ಕಳೆದ ವರ್ಷ ಪ್ರವಾಹ, ಈ ವರ್ಷ ಕೊರೊನಾ ಈ ರೀತಿ ಒಂದಿಲ್ಲೊಂದು ತೊಂದ್ರೆ ಅನುಭವಿಸುತ್ತಿರುವ ರೈತರು ಬೆಳೆದ ಬೆಳೆಗಳಿಗೆ ಹಂದಿಗಳ ಕಾಟ ಶುರುವಾಗಿದೆ.
ರೈತರ ಬೆಳೆಗೆ ಹಂದಿ ಕಾಟ: ಸಂಕಷ್ಟದಲ್ಲಿ ರೈತರು ಹೌದು, ಧಾರವಾಡ ತಾಲೂಕಿನ ಮನಸೂರ ಹಾಗೂ ಸಲಕಿನಕೊಪ್ಪ ಗ್ರಾಮಗಳ ಸರಹದ್ದಿನಲ್ಲಿ ಬರುವ ಭೂಮಿಗಳಲ್ಲಿ ಬೆಳೆದ ಬೆಳೆಗಳಿಗೆ ಹಂದಿಗಳ ಕಾಟ ಶುರುವಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ. ಮೆಕ್ಕೆಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಹಂದಿಗಳು ಹಾಳು ಮಾಡುತ್ತಿವೆ.
ಹಂದಿ ಕಾಟದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಒಂದು ಎಕರೆ ಮೆಕ್ಕೆಜೋಳ ಬೆಳೆಯಲು ರೈತರು ಹತ್ತರಿಂದ ಐದಿನೈದು ಸಾವಿರ ಖರ್ಚು ಮಾಡುತ್ತಾರೆ. ಆದ್ರೆ ಹಂದಿಗಳ ಕಾಟದಿಂದ ಬರುವ ಆದಾಯ ಕೂಡಾ ಕಡಿಮೆಯಾಗುತ್ತಿದೆ ಎಂದು ರೈತರು ಈಟಿವಿ ಭಾರತ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರೈತರು ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ರೂ ಸಹಿತ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಆಗಮಿಸಿ ಪರಿಶೀಲನೆ ಸಹ ನಡೆಸುತ್ತಿಲ್ಲ ಎಂದು ರೈತರು ದೂರಿದ್ದಾರೆ.