ಹುಬ್ಬಳ್ಳಿ:ಸತತವಾಗಿ ಸುರಿದ ಮಳೆಯಿಂದಾಗಿ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳು ನೆರೆ ಹಾವಳಿಗೆ ತತ್ತರಿಸಿದ್ದವು. ವರುಣನ ಆರ್ಭಟಕ್ಕೆ ಅನೇಕ ಜನ ಪ್ರಾಣ ಕಳೆದುಕೊಂಡರು. ಇಂತಹ ಪ್ರವಾಹದ ಭೀಕರತೆ ಹಾಗು ನೆರೆ ಸಂತ್ರಸ್ಥರ ಪರಿಸ್ಥಿತಿಯನ್ನು ಪ್ರಾಣದ ಹಂಗು ತೊರೆದು ಸೆರೆಹಿಡಿದ ಛಾಯಾಗ್ರಾಹಕರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಇಂದಿರಾ ಗಾಜಿನ ಮನೆಯಲ್ಲಿ ಛಾಯಾ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.