ಧಾರವಾಡ :ಮಕರ ಸಂಕ್ರಮಣದ ದಿನ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಸ್ಥರು ನಡೆಸುವ ಪ್ರತಿಭಟನೆಗೆ ಜನರು ಬೆಂಬಲ ನೀಡುವಂತೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಹೆಚ್ ನೀರಲಕೇರಿ ಮನವಿ ಮಾಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಶೋಕ ಖೇಣಿ ನೇರ ಹೊಣೆ ಎಂದು ಆರೋಪಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಹೆಚ್ ನೀರಲಕೇರಿ ತಮ್ಮ ತಾಯಿಯನ್ನು ಕಳೆದುಕೊಂಡ ಮಕ್ಕಳು ಹಾಗೂ ಮನೆಯವರನ್ನು ಕಳೆದುಕೊಂಡ ಕುಟುಂಬಗಳು ಅನಾಥವಾಗಿವೆ. ಇನ್ನಾದರೂ ಜನಪ್ರತಿನಿಧಿಗಳು ರಸ್ತೆ ಅಗಲೀಕರಣದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು. ಓದಿ : ಧಾರವಾಡ ಅಪಘಾತ ಪ್ರಕರಣ: ಪ್ರತಿಭಟಿಸಲು ನಿರ್ಧರಿಸಿದ ಮೃತರ ಸಂಬಂಧಿಕರು!
ಫೆ.6 ರಂದು ಅಪಘಾತದಲ್ಲಿ ಮೃತಪಟ್ಟ ಎಲ್ಲ ಮಹಿಳೆಯರ ಕುಟುಂಬಸ್ಥರೊಂದಿಗೆ ಘಟನೆ ನಡೆದ ಜಾಗದಲ್ಲೇ ಪೂಜೆ ಸಲ್ಲಿಸಿ ಎರಡ್ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಲಿದ್ದೇವೆ. ಅವರ ಕುಟುಂಬಕ್ಕೆ ಆದ ನೋವು ಇನ್ನೊಬ್ಬರ ಕುಟುಂಬಕ್ಕೆ ಆಗಬಾರದು ಎಂಬ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.