ಧಾರವಾಡ: ಪಿಎಫ್ಐ ಒಂದು ದೇಶದ್ರೋಹಿ ಸಂಘಟನೆ. ಅದರ ಬಗ್ಗೆ ಹೆಚ್ಚು ಹೇಳಬೇಕಾದ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟಿನ ತಿರ್ಮಾನದ ನಂತರವೇ ಟ್ರಸ್ಟ್ ರಚಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಸೇರಿದ ಮಂದಿರ ಅದು. ಶ್ರೀರಾಮ ಎಲ್ಲರಿಗೂ ಸೇರಿದವನು. ಆತನ ಆದರ್ಶ ಜಾತಿ ಮತ ಪಂಥ ಎಲ್ಲವನ್ನೂ ಮೀರಿರುವಂಥದ್ದು. ಆದ್ದರಿಂದಲೇ ರಾಮನಿಗೆ ಮರ್ಯಾದಾ ಪುರುಷೋತ್ತಮ ಎಂಬ ಹೆಸರು ಬಂದಿರುವುದು. ಪಿಎಫ್ಐ ಸಂಘಟನೆಗಳು ಹೇಳುವುದೆಲ್ಲಾ ಸತ್ಯವಲ್ಲ ಎಂದು ಕಿಡಿಕಾರಿದರು.