ಕರ್ನಾಟಕ

karnataka

ETV Bharat / state

ಪೆಟ್ರೋಲ್ ಬಂಕ್ ಮುಷ್ಕರ ಹಿನ್ನೆಲೆ: ಬಂಕ್​​​​ಗಳಿಗೆ ಮುಗಿಬಿದ್ದ ವಾಹನ ಸವಾರರು - Motorists lined up for diesel and petrol in hubballi

ನಾಳೆ ದೇಶಾದ್ಯಂತ ಪೆಟ್ರೋಲ್ ಬಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದೇ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ವಾಹನ ಸವಾರರು ಸಾಲುಗಟ್ಟಿ ನಿಂತಿರುವ ದೃಶ್ಯ ಹುಬ್ಬಳ್ಳಿಯಲ್ಲಿ ಕಂಡುಬಂದಿದೆ.

petrol-bunk-strike-motorists-lined-up-for-diesel-and-petrol-in-hubballi
ಪೆಟ್ರೋಲ್ ಬಂಕ್ ಮುಷ್ಕರ ಹಿನ್ನೆಲೆ : ಬಂಕ್ ಗಳಿಗೆ ಮುಗಿಬಿದ್ದ ವಾಹನ ಸವಾರರು

By

Published : May 30, 2022, 4:12 PM IST

ಹುಬ್ಬಳ್ಳಿ : ನಾಳೆ ದೇಶಾದ್ಯಂತ ಪೆಟ್ರೋಲ್ ಬಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪೆಟ್ರೋಲ್ ಬಂಕ್ ಬಳಿ ಮುಗಿಬಿದ್ದಿದ್ದಾರೆ. ನಾಳೆ ಮುಷ್ಕರದ ಹಿನ್ನಲೆ ಇಂದೇ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ. ಹುಬ್ಬಳ್ಳಿಯ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ವಾಹನ ಸವಾರರು ಮುಗಿಬಿದ್ದ ದೃಶ್ಯ ಕಂಡುಬಂದಿದೆ. ಗ್ರಾಮೀಣ ಪ್ರದೇಶದಲ್ಲಿನ ಪೆಟ್ರೋಲ್ ಬಂಕ್ ಗಳಲ್ಲಿಯೂ ಮುಗಿಬಿದ್ದ ಘಟನೆ ನಡೆದಿದೆ.

ಇಂಧನ ಖರೀದಿಸಲು ಬಂಕ್ ಗಳಿಗೆ ಮುಗಿಬಿದ್ದ ವಾಹನ ಸವಾರರು

ಇಲ್ಲಿನ ಗ್ರಾಮೀಣ ಭಾಗದ ಜನರು ಕ್ಯಾನ್​​ಗಳನ್ನು ಹಿಡಿದು, ವಾಹನಗಳ ಸಮೇತ ಸಾಲುಗಟ್ಟಿ ನಿಂತು, ಪೆಟ್ರೋಲ್ ಮತ್ತು ಡೀಸೆಲ್ ಸಿಗದೇ ಹೋದಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಕೇಂದ್ರ ಸರಕಾರವು ದಿಢೀರಾಗಿ ಆಗಿ ತೆರಿಗೆ ಇಳಿಸಿದ್ದರಿಂದ ಉಂಟಾದ ನಷ್ಟ ಭರ್ತಿ ಮಾಡಿಕೊಡುವಂತೆ ಆಗ್ರಹಿಸಿರುವ ಬಂಕ್ ಮಾಲೀಕರು ಒಂದು ದಿನದ ಪೆಟ್ರೋಲ್ ಬಂಕ್ ಬಂದ್ ಗೆ ಕರೆ ನೀಡಿದ್ದಾರೆ.

ಓದಿ :ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾಗೆ ಪ್ರಗತಿಪರ ಸಂಘಟನೆಗಳ ಆಗ್ರಹ

ABOUT THE AUTHOR

...view details