ಕರ್ನಾಟಕ

karnataka

ETV Bharat / state

ವಿಜಯದಶಮಿ ಸಂಭ್ರಮದಂದೇ ಬಂಗಾರಕ್ಕಾಗಿ ಗಲಾಟೆ: ಅಣ್ಣನಿಂದ ತಮ್ಮನಿಗೆ ಚಾಕು ಇರಿತ - property dispute in hubballi

ಬಂಗಾರ ಹಾಗೂ ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬ ತನ್ನ ತಮ್ಮನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

person-stabbed-brother-over-property-dispute-in-hubballi
ವಿಜಯದಶಮಿ ಸಂಭ್ರಮದಲ್ಲೇ ಗಲಾಟೆ: ಅಣ್ಣನಿಂದ ತಮ್ಮನಿಗೆ ಚಾಕು ಇರಿತ

By

Published : Oct 5, 2022, 4:24 PM IST

ಹುಬ್ಬಳ್ಳಿ:ಬಂಗಾರ ಹಾಗೂ ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಅಣ್ಣನೊಬ್ಬ ತನ್ನ ತಮ್ಮನಿಗೆ ಚಾಕು ಇರಿದ ಘಟನೆ ನಗರದ ಕೇಶ್ವಾಪೂರದಲ್ಲಿ ನಡೆದಿದೆ. ಸಂಜಯ ಬಾಕಳೆ ಎಂಬಾತ ಸಹೋದರ ಸಾಗರ ಬಾಕಳೆಗೆ ಚಾಕು ಇರಿದಿದ್ದಾನೆ.

ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಪೂಜೆಗೆ ತಮ್ಮ ಸಾಗರ ಬಂಗಾರ ಕೇಳಿದ್ದಕ್ಕೆ ಅಣ್ಣ ಸಂಜಯ ಚಾಕುವಿನಿಂದ ಇರಿದಿದ್ದಾನೆ. ಸಹೋದರರ ನಡುವೆ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ಕಲಹ ನಡೆಯುತ್ತಿತ್ತು. ಸಂಜಯ ಹಾಗೂ ಪತ್ನಿ ಸೋನಾಲಿ ಅವರು ಆಸ್ತಿ ವಿಚಾರವಾಗಿ ನಿರಂತರ ಜಗಳವಾಡುತ್ತಿದ್ದರು ಎನ್ನಲಾಗಿದೆ.

ಘಟನೆಯಿಂದ ಸಾಗರಗೆ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸಹೋದರ ಸಂಜಯ ಬಾಕಳೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಆಸ್ತಿಗಾಗಿ ಹೆತ್ತ ತಾಯಿ ಹತ್ಯೆಗೆ ಯತ್ನ.. ಮಗನನ್ನು ಬಂಧಿಸಿದ ಪೊಲೀಸರು

ABOUT THE AUTHOR

...view details