ಹುಬ್ಬಳ್ಳಿ:ಚಲಿಸುತ್ತಿದ್ದ ರೈಲಿಗೆ ಸಿಲುಕಿವ್ಯಕ್ತಿಯೋರ್ವ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ಸಂಭವಿಸಿದೆ. ಶಾಲಿಮಾರ್-ವಾಸ್ಕೋಡಿಗಾಮಾ ರೈಲಿಗೆ ಹೆಗ್ಗೇರಿ ನಿವಾಸಿಯೋರ್ವ ಸಿಲುಕಿದ್ದು, ರೈಲು ಹುಬ್ಬಳ್ಳಿ ನಿಲ್ದಾಣದಿಂದ ಹೊರಟ ನಾಲ್ಕೈದು ನಿಮಿಷದಲ್ಲೇ ಈ ಘಟನೆ ನಡೆದಿದೆ.
ರೈಲು ಚಲಿಸುತ್ತಿದ್ದ ವೇಳೆ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ಹಾರ್ನ್ ಮಾಡಿದ್ದಾರೆ. ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ ಎನ್ನಲಾಗ್ತಿದೆ.