ಧಾರವಾಡ:ಸ್ನಾನಕ್ಕೆ ಬೆಣ್ಣೆಹಳ್ಳದಲ್ಲಿ ಇಳಿದಾಗ ಫಿಟ್ಸ್ ಬಂದು ಯುವಕಯೋರ್ವ ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಯಮನೂರಿನಲ್ಲಿ ನಡೆದಿದೆ. ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವ್ಯಕ್ತಿ ಹಳ್ಳದಲ್ಲಿ ಇಳಿದಿದ್ದ ಎನ್ನಲಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿಯಾಗಿದ್ದಾರೆ. ತಾಯಿ ಜೊತೆಗೆ ದುಡಿಯಲು ವಾಸಿಂ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಕುಟುಂಬ ಬಂದಿತ್ತು. ಬೆಣ್ಣೆಹಳ್ಳಕ್ಕೆ ಸ್ನಾನ ಮಾಡಲು ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.