ಧಾರವಾಡ: ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿರುವುದು ಅಕ್ಷಮ್ಯ ಅಪರಾಧ. ಅವಕಾಶ ಕೊಟ್ಟು ತಪ್ಪು ಮಾಡಿ, ಬಿಜೆಪಿ ಆಡಳಿತದಲ್ಲಿರುವ ಪಾಲಿಕೆ ದ್ರೋಹ ಮಾಡಿದೆ ಎಂದು ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರು ಅತ್ಯಂತ ನೀಚ ಕೆಲಸ ಮಾಡಿದ್ದಾರೆ. ಇದೇ ಬಿಜೆಪಿಯವರು ಟಿಪ್ಪು ಜಯಂತಿ ಬ್ಯಾನ್ ಮಾಡಿದ್ರು. ಈಗ ಬ್ಯಾನ್ ಮಾಡಿದವರೇ ಅನುಮತಿ ಕೊಡ್ತಾರೆಂದರೆ ಇವರ ನಿಲುವು ಹೇಗಿದೆ?. ಇವರಿಗೆ ತತ್ವ ಬೇಕಾಗಿಲ್ಲ ಅಧಿಕಾರ ಬೇಕು, ಓಲೈಕೆ ಬೇಕು. ಬಿಜೆಪಿಯವರ ನಿಲುವು ಬಟಾಬಯಲಾಗಿದೆ ಎಂದರು.