ಹುಬ್ಬಳ್ಳಿ: ಸಾಮಾಜಿಕ ಅಂತರ ಮರೆತ ಜನರನ್ನು ಪೊಲೀಸರು ಚದುರಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಬೀದಿಪಾಲಾಗಿದೆ.
ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನತೆ.. ಲಕ್ಷಾಂತರ ಮೌಲ್ಯದ ತರಕಾರಿ ಬೀದಿ ಪಾಲು - ಕೊರೊನಾ ಮುನ್ನೆಚ್ಚರಿಕಾ ಕ್ರಮ
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪೊಲೀಸರು ಜನರನ್ನು ಚದುರಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಬೀದಿಪಾಲಾಗಿದ್ದು, ದನಕರುಗಳು ತಿಂದಿವೆ, ಕೆಲವನ್ನು ಜನರೇ ತುಂಬಿಕೊಂಡು ಹೋಗಿದ್ದಾರೆ.
ಮಾರ್ಕೆಟ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನತೆ.. ಲಕ್ಷಾಂತರ ಮೌಲ್ಯದ ತರಕಾರಿ ರಸ್ತೆ ಪಾಲು
ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ತರಕಾರಿ ವ್ಯಾಪಾರಿಗಳು ,ರೈತರು ಮತ್ತು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂಕುನುಗ್ಗಲಿನಲ್ಲಿ ಖರೀದಿ ಹಾಗೂ ಮಾರಾಟದಲ್ಲಿ ತೊಡಗಿದ್ದರಿಂದ ಪೊಲೀಸರು ಜನರನ್ನು ಚದುರಿಸಿದರು.
ಇದರಿಂದ ತರಕಾರಿ ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿತು. ಬಿಡಾಡಿ ದನಕರುಗಳು ಇದೇ ತರಕಾರಿ ತಿಂದು ಹೊಟ್ಟೆ ತುಂಬಿಸಿಕೊಂಡರೆ, ಜನರು ಸಹ ತರಕಾರಿಗಳನ್ನು ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು.