ಕರ್ನಾಟಕ

karnataka

ETV Bharat / state

ಹು - ಧಾ ಪಾಲಿಕೆ ಎಲೆಕ್ಷನ್​: ವಿವಿ ಪ್ಯಾಟ್‌ ಇಲ್ಲದಿರುವುದಕ್ಕೆ ಮತದಾನ ಬಹಿಷ್ಕರಿಸಿದ ಜನ - ಕೊರೊನಾ ನಿಯಮ ಮರೆತು ಮತದಾನ

ವಿವಿ ಪ್ಯಾಟ್‌ ಇಲ್ಲದಿರುವುದಕ್ಕೆ ಹುಬ್ಬಳ್ಳಿಯ ವಾರ್ಡ್​ ನಂಬರ್ 27ರ 5ನೇ ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ.

boycotted voting in hubli
ಮತದಾನ ಬಹಿಷ್ಕರಿಸಿದ ಜನ

By

Published : Sep 3, 2021, 10:36 AM IST

ಹುಬ್ಬಳ್ಳಿ/ ಧಾರವಾಡ : ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿವಿ ಪ್ಯಾಟ್‌ ಇಲ್ಲದಿರುವುದಕ್ಕೆ ಸ್ಥಳೀಯರು ಮತದಾನ ಬಹಿಷ್ಕಾರ ಮಾಡಿರುವ ಘಟನೆ ನಡೆದಿದೆ. ವಾರ್ಡ್​ ನಂಬರ್ 27 ರ 5ನೇ ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ 6,7,8,9,10 ರಲ್ಲಿ ಮತದಾನ ಸ್ಥಗಿತಗೊಳಿಲಾಗಿದೆ. ವಿವಿ ಪ್ಯಾಟ್‌ ಗೊಂದಲದಿಂದ ಮತದಾನ ಮಾಡಲು ಬಂದ ಜನರು ಮರಳಿ ಹೋಗುತ್ತಿದ್ದಾರೆ.

ಹುಬ್ಬಳ್ಳಿಯ ವಾರ್ಡ್​ ನಂಬರ್ 27ರ 5ನೇ ಮತಗಟ್ಟೆಯಲ್ಲಿ ಮತದಾನ ಬಹಿಷ್ಕಾರ

ಪಕ್ಷದ ಚಿಹ್ನೆ ಸಮೇತ ಮತಕೇಂದ್ರಕ್ಕೆ ಆಗಮಿಸಿದ ಅಭ್ಯರ್ಥಿ:

ಧಾರವಾಡದ ವಾರ್ಡ್ ನಂ. 13ರ ಬಿಜೆಪಿ ಅಭ್ಯರ್ಥಿ ಸುರೇಶ ಬೆದರೆ ಮತದಾನದ ವೇಳೆ ಯಡವಟ್ಟು‌ ಮಾಡಿಕೊಂಡಿದ್ದಾರೆ. ಮರಾಠ ಕಾಲೋನಿಯ ಬುದ್ಧ ರಕ್ಕಿತ ಶಾಲೆಯಲ್ಲಿನ ಮತ ಕೇಂದ್ರಕ್ಕೆ ಜೇಬಿನಲ್ಲಿ ಕಮಲದ ಚಿಹ್ನೆ ಹಾಕಿಕೊಂಡೇ ಮತಗಟ್ಟೆ ಪ್ರವೇಶ ಮಾಡಿದ್ದಾರೆ. ಮತಕೇಂದ್ರದ 200 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಪಕ್ಷದ ಚಿಹ್ನೆ ತರಬಾರದೆಂಬ ನಿಯಮವಿದ್ದರೂ ಕೂಡ ಅಭ್ಯರ್ಥಿ‌ ಸುರೇಶ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೊರೊನಾ ನಿಯಮ ಮರೆತು ಮತದಾನ:ಹುಬ್ಬಳ್ಳಿಯಲ್ಲಿ ಸಾಮಾಜಿಕ ಅಂತರ ಮತ್ತು ಕೊರೊನಾ ನಿಯಮಾವಳಿಗಳನ್ನು ಮರೆತು ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂದಿತು. ಹುಬ್ಬಳ್ಳಿ ನಗರದ ವಾರ್ಡ್ ನಂಬರ್ 71ರ ವ್ಯಾಪ್ತಿಯ ನ್ಯೂ - ಇಂಗ್ಲಿಷ್ ಶಾಲೆಯ ಮತಗಟ್ಟೆ ಕೇಂದ್ರ 1 ರಲ್ಲಿ ಮತದಾರರು ಸಾಮಾಜಿಕ ಅಂತರ ಮರೆತು ಮತದಾನದ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು ಕಂಡು ಬಂತು. ಸ್ಥಳದಲ್ಲಿ ಚುನಾವಣಾ ಸಿಬ್ಬಂದಿ ಇದ್ದರೂ ಕೂಡ ಕೊರೊನಾ ನಿಯಮಾವಳಿ ಪಾಲಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ABOUT THE AUTHOR

...view details