ಕರ್ನಾಟಕ

karnataka

ETV Bharat / state

3ನೇ ಹಂತದ ಲಾಕ್‌ಡೌನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ.. ಎಣ್ಣೆ ಕೊಳ್ಳಲು ಕುಡುಕರ ದಂಡು!! - ಮದ್ಯ ಮಾರಾಟಕ್ಕೆ ಅವಕಾಶ

ಕೆಲವು ಅಂಗಡಿಗಳ ಮುಂದೆ ನೂರಾರು ಜನರು ಕ್ಯೂ ನಿಂತಿದ್ದಾರೆ.‌ ಇಷ್ಟು ದಿನಸಿ ಹಾಗೂ ತರಕಾರಿ‌ ಖರೀದಿಗಾಗಿ ಜನ ಮುಗಿಬೀಳುತ್ತಿದ್ದರು.

people que in hubli wine stores
ಮದ್ಯ ಕೊಳ್ಳಲು ಜನರ ದಂಡು

By

Published : May 4, 2020, 10:09 AM IST

ಹುಬ್ಬಳ್ಳಿ :3ನೇ ಹಂತದ ಲಾಕ್‌ಡೌನ್‌ನಲ್ಲಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.‌ ಹೀಗಾಗಿ ನಗರದ ಬಹುತೇಕ ಮದ್ಯದ ಅಂಗಡಿಗಳ ಮುಂದೆ ಮದ್ಯಪ್ರಿಯರ ಕ್ಯೂ ನಿಂತಿರುವ ದೃಶ್ಯ ಕಂಡು ಬಂದವು‌.

ಮದ್ಯ ಕೊಳ್ಳಲು ಕುಡುಕರ ದಂಡು..
ಕಳೆದ ಒಂದು ತಿಂಗಳಿಂದ ಎಣ್ಣೆ ಇಲ್ಲದೆ ಎಣ್ಣೆಪ್ರಿಯರು ಕಂಗಾಲಾಗಿದ್ದರು. ಆದರೆ, ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ‌ ನೀಡಿದ್ದರಿಂದ ಬೇಗ ಎಣ್ಣೆ ಖಾಲಿಯಾಗುತ್ತದೆ ಎಂಬ ಭಯದಿಂದ ಬೆಳಗ್ಗೆಯಿಂದಲೇ ಕುಡುಕರು ಬಾರ್ ಹಾಗೂ ಎಂಎಸ್‌ಐಎಲ್ ಹಾಗೂ ಎಂಆರ್​​ಪಿ ಮಳಿಗೆಗಳ ಮುಂದೆ ಸಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಕೆಲವು ಅಂಗಡಿಗಳ ಮುಂದೆ ನೂರಾರು ಜನರು ಕ್ಯೂ ನಿಂತಿದ್ದಾರೆ.‌ ಇಷ್ಟು ದಿನಸಿ ಹಾಗೂ ತರಕಾರಿ‌ ಖರೀದಿಗಾಗಿ ಜನ ಮುಗಿಬೀಳುತ್ತಿದ್ದರು. ಆದರೆ, ಈಗ ಮದ್ಯ‌ ಖರೀದಿಗೆ ಮುಗಿಬೀಳುತ್ತಿದ್ದಾರೆ. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.

ABOUT THE AUTHOR

...view details