ಧಾರವಾಡ: ಬಸ್ ಕಂಡಕ್ಟರ್ ಮಗಳು, ಹೂವಿನ ವ್ಯಾಪಾರಿ, ತಹಶೀಲ್ದಾರ್ ಕಚೇರಿಯ ಏಜೆಂಟ್ ಸೇರಿದಂತೆ ಹಲವರಲ್ಲಿ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಸ್ ಕಂಡಕ್ಟರ್ ಮಗಳಿಂದ ತಂದೆಗೂ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡದಲ್ಲಿ ಹೆಚ್ಚುತ್ತಿದೆ ಕೊರೊನಾ ಉಪಟಳ, ಜನರಲ್ಲಿ ಹೆಚ್ಚಿದ ಆತಂಕ - dharwad corona news
ಧಾರವಾಡದಲ್ಲಿ ನಿನ್ನೆ ಬಸ್ ಕಂಡಕ್ಟರ್ ಮಗಳು, ಹೂವಿನ ವ್ಯಾಪಾರಿ, ತಹಶೀಲ್ದಾರ್ ಕಚೇರಿಯ ಏಜೆಂಟ್ ಸೇರಿದಂತೆ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಧಾರವಾಡದಲ್ಲಿ ಕೊರೊನಾತಂಕ
ಹೂವಿನ ವ್ಯಾಪಾರಿಗೆ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಆತ ವಾಸವಿದ್ದ ಗರಗ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟ್ ಆಗಿದ್ದ 29 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳಲ್ಲಿಯೂ ಆತಂಕ ಶುರುವಾಗಿದೆ.