ಹುಬ್ಬಳ್ಳಿ:ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಆದ್ರೆ, ಹುಬ್ಬಳ್ಳಿಯಲ್ಲಿ ಜನರು ನಿಯಮ ಉಲ್ಲಂಘಿಸಿ ಯಥಾಸ್ಥಿತಿ ದಿನಚರಿ ಪಾಲಿಸುತ್ತಿದ್ದಾರೆ.
ಲಾಕ್‌ಡೌನ್‌ಗೆ ನಿರ್ಲಕ್ಷಿಸಿ ಮನಬಂದಂತೆ ತಿರುಗುತ್ತಿರುವ ಹುಬ್ಬಳ್ಳಿ ಮಂದಿ - ಹುಬ್ಬಳ್ಳಿ ಕೊರೊನಾ ನ್ಯೂಸ್
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಲಾಕ್ ಡೌನ್ ಆದೇಶಿಸಿದೆ. ಆದ್ರೆ ಹುಬ್ಬಳ್ಳಿ ಜನತೆ ಇದಕ್ಕೂ ನಮಗೂ ಸಂಬಂಧವಿಲ್ಲವೇನೋ ಎನ್ನುವಂತೆ ತಿರುಗಾಡುತ್ತಿದ್ದರು.
ಲಾಕ್ ಡೌನ್ ಗೆ ಡೊಂಟ್ ಕೇರ್ ಎನ್ನುತ್ತಾ ಮನಬಂದಂತೆ ತಿರುಗಾಡುತ್ತಿರುವ ಹುಬ್ಳಿ ಮಂದಿ
ಮುಂಜಾನೆಯೇ ನಗರದ ಬಹುತೇಕ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನ ಮನೆಯಿಂದ ಹೊರಬಂದು ತಿರುಗಾಡುವುದು ಸಾಮಾನ್ಯವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈರಸ್ ದೇಶವ್ಯಾಪಿ ಹಬ್ಬದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಸರ್ಕಾರ ಸೂಚಿಸಿದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಿದೆ.