ಹುಬ್ಬಳ್ಳಿ:ಮಾನಸಿಕ ಅಸ್ವಸ್ಥನೋರ್ವನಗರದ ಚೆನ್ನಮ್ಮ ಸರ್ಕಲ್ನ ಹಳೇ ಪಿಬಿ ರಸ್ತೆಯ ಬಳಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ.
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಸಾರ್ವಜನಿಕರಿಗೆ ಮಾನಸಿಕ ಅಸ್ವಸ್ಥನ ಕಿರಿಕಿರಿ - mentally Retired
ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಘಟನೆ ಹುಬ್ಬಳ್ಳಿ ನಗರದ ಚೆನ್ನಮ್ಮ ಸರ್ಕಲ್ನ ಹಳೇ ಪಿಬಿ ರಸ್ತೆಯ ಬಳಿ ನಡೆದಿದೆ.
ಮಾನಸಿಕ ಅಸ್ವಸ್ಥನೋರ್ವನ ಕಿರಿಕಿರಿಗೆ ಬೇಸತ್ತ ಹುಬ್ಬಳ್ಳಿ ಮಂದಿ
ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರನ್ನು ತಡೆದು ಕೋಲಿನಿಂದ ಹೊಡೆಯುವಂತೆ ವ್ಯಕ್ತಿ ಹೇಳುತ್ತಾನೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಅಷ್ಟೇ ಅಲ್ಲದೆ, ಈತ ರಸ್ತೆಯುದ್ದಕ್ಕೂ ಮನಬಂದಂತೆ ಸುತ್ತಾಡುತ್ತಿದ್ದು ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ ಎಂದು ಜನರು ತಿಳಿಸಿದ್ದಾರೆ.