ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಮರಳಿದ ವೈದ್ಯನಿಗೆ ಅಕ್ಕರೆಯ ಸ್ವಾಗತ - corona warrior

ಕಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ.ಸಚಿನ ಹೊಸಕಟ್ಟಿ ಎಂಬುವವರು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಇಂದು ಮನೆಗೆ ಆಗಮಿಸಿದಾಗ ಸಾರ್ವಜನಿಕರು ಸ್ವಾಗತಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ಕಾಲೋನಿ ಜನರಿಂದ ಅದ್ದೂರಿ ಸ್ವಾಗತ
ಕೊರೊನಾ ವಾರಿಯರ್ಸ್‌ಗೆ ಕಾಲೋನಿ ಜನರಿಂದ ಅದ್ದೂರಿ ಸ್ವಾಗತ

By

Published : May 2, 2020, 1:55 PM IST

ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಾರೆ. ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ‌ಮನೆಗೆ ಆಗಮಿಸಿದ ಕಿಮ್ಸ್ ವೈದ್ಯನಿಗೆ ಕಾಲೋನಿ ಜನರು ವಿಶಿಷ್ಟವಾಗಿ ಸ್ವಾಗತ ಕೋರಿದ್ದಾರೆ.
ಕಿಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ.ಸಚಿನ ಹೊಸಕಟ್ಟಿ ಎಂಬುವವರು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಇಂದು ಮನೆಗೆ ಆಗಮಿಸಿದ್ದಾರೆ.

ಕೊರೊನಾ ವಾರಿಯರ್ಸ್‌ಗೆ ಕಾಲೋನಿ ಜನರಿಂದ ಅದ್ದೂರಿ ಸ್ವಾಗತ
ಧಾರವಾಡ ಜಿಲ್ಲೆಯಲ್ಲಿ ಹತ್ತು ಪ್ರಕರಣಗಳ ಪೈಕಿ ಎರಡು ಪ್ರಕರಣಗಳು ಗುಣಮುಖರಾಗಲು ಹಗಲಿರುಳು ಶ್ರಮಿಸಿದ ಕೊರೊನಾ ವಾರಿಯರ್ಸ್‌ ತಂಡದಲ್ಲಿದ್ದ ಡಾ.ಸಚಿನ್ ಹೊಸಕಟ್ಟಿಯವರನ್ನು ನಿವಾಸಿಗಳು ಗೌರವದ ಫಲಕಗಳು ಪ್ರದರ್ಶಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details