ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ನಾಳೆಯಿಂದ ಲಾಕ್ಡೌನ್ ಘೋಷಣೆಯಾಗಿದ್ದು, ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಬೆನ್ನಲ್ಲೇ ಮದ್ಯಪ್ರಿಯರು ಮದ್ಯ ಮಾರಾಟದ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಖರೀದಿಗೆ ಮುಂದಾದರು.
ಲಾಕ್ಡೌನ್ ಎಫೆಕ್ಟ್: ಅವಳಿ ನಗರದಲ್ಲಿ ಮದ್ಯ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು
ಹತ್ತು ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು, ಮದ್ಯಪ್ರಿಯರು ಬಾರ್ಗಳಿಗೆ ಲಗ್ಗೆ ಇಟ್ಟು ಮದ್ಯ ಖರೀದಿಸಿದರು. ಕಳೆದ ಲಾಕ್ಡೌನ್ನಲ್ಲಿ ಮದ್ಯಕ್ಕಾಗಿ ಪರದಾಡಿದ್ದ ಹಲವರು ಈಗ ಹತ್ತು ದಿನಗಳಿಗೆ ಆಗುವಷ್ಟು ಮದ್ಯ ಖರೀದಿಗೆ ಮುಂದಾಗಿದ್ದಾರೆ.
ಹತ್ತು ದಿನಗಳ ಲಾಕ್ಡೌನ್ ಘೋಷಣೆಯಾಗಿದ್ದು, ಮದ್ಯಪ್ರಿಯರು ಬಾರ್ಗಳಿಗೆ ಲಗ್ಗೆ ಇಟ್ಟು ಮದ್ಯ ಖರೀದಿಸಿದರು. ಕಳೆದ ಲಾಕ್ ಡೌನ್ನಲ್ಲಿ ಮದ್ಯಕ್ಕಾಗಿ ಪರದಾಡಿದ್ದ ಮದ್ಯಪ್ರಿಯರು ಈಗ ಹತ್ತು ದಿನಗಳಿಗೆ ಆಗುವಷ್ಟು ಮದ್ಯ ಖರೀದಿಗೆ ಮುಂದಾಗಿದ್ದಾರೆ.
ರಸ್ತೆಗಳು ಜಾಮ್ ಜಾಮ್: ಲಾಕ್ಡೌನ್ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲ ರಸ್ತೆಗಳು ಫುಲ್ ಜಾಮ್ ಆಗಿದ್ದವು. ದಿನಬಳಕೆ ವಸ್ತುಗಳನ್ನ ಪಡೆಯಲು ಏಕಕಾಲಕ್ಕೆ ಜನರು ಆಗಮಿಸಿದ್ದರಿಂದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದವು. ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.