ಕರ್ನಾಟಕ

karnataka

ETV Bharat / state

ಕನ್ನಡದ ಗಟ್ಟಿ ದನಿಗಿತ್ತು 'ಪಾಪು'ವಿನ ಮನಸ್ಸು.. ಚಾಲಕನಿಗೇ ಕಾರು ಉಡುಗೊರೆ ಕೊಟ್ಟ ಪಾಟೀಲ ಪುಟ್ಟಪ್ಪ.. - Hubli latest news

ಸಯ್ಯದ್​ ಸುಮಾರು 25 ವರ್ಷಗಳಿಂದ ಪಾಪು ಅವರ ಕಾರು ಚಲಾಯಿಸುತ್ತಿದ್ದರು. ಚಾಲಕ ಅಷ್ಟೇ ಅಲ್ಲ, ಪಾಪು ಅವರ ನಿತ್ಯದ ಕೆಲಸದ ಜೊತೆಗೆ ಅವರ ಸೇವೆಯನ್ನೂ ಮಾಡುತ್ತಿದ್ದರು. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಸಯ್ಯದ್, ಪಾಪು ಅವರ ಜೊತೆ ಇದ್ದು ಎಲ್ಲ ಕಾರ್ಯ ಮಾಡುತ್ತಿದ್ದರು..

Patil Puttappa car driver
ಸಯ್ಯದ್

By

Published : Sep 28, 2020, 7:56 PM IST

ಹುಬ್ಬಳ್ಳಿ: ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ವಿಧಿವಶರಾಗುವ ಮೊದಲು, ವಿಲ್‌ವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ಕಾರು ಚಾಲಕನಾದ ಸಯ್ಯದ್ ಅವರಿಗೆ ದೊಡ್ಡ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

ಕನ್ನಡಪರ ಹೋರಾಟಗಳಿಂದಲೇ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು, ನಮ್ಮೆಲ್ಲರನ್ನು ಅಗಲಿ ಆರು ತಿಂಗಳು ಕಳೆದಿದೆ. ಅವರು ವಿಧಿವಶರಾಗುವ ಮೊದಲು ವಿಲ್ ಒಂದನ್ನು ಬರೆದಿದ್ದರು. ತಮ್ಮ ಮೆಚ್ಚಿನ ಕಾರು ಚಾಲಕ ಸಯ್ಯದ್​ಗೆ ವಿಲ್​ನಲ್ಲಿ ಉಡುಗೊರೆಯೊಂದನ್ನು ಬರೆದಿಟ್ಟಿದ್ದಾರೆ. ತಾವು ಪ್ರಯಾಣ ಮಾಡುತ್ತಿದ್ದ ಮಾರುತಿ ಸುಝೂಕಿ ಕಂಪನಿಯ ಬ್ರೇಝಾ ಎಸ್​ಯುವಿ ಕಾರನ್ನು ತಮ್ಮ ಕಾರು ಚಾಲಕನಿಗೇ ಉಡುಗೊರೆಯಾಗಿ ಕೊಡಲು ವಿಲ್​ನಲ್ಲಿ ಉಲ್ಲೇಖಸಿರುವುದು ಚಾಲಕನ ಮುಖದಲ್ಲಿ ಸಂತಸ ಮೂಡಿಸಿದೆ.

ಕಾರು ಚಾಲಕ ಸಯ್ಯದ್

ಸಯ್ಯದ್​ ಸುಮಾರು 25 ವರ್ಷಗಳಿಂದ ಪಾಪು ಅವರ ಕಾರು ಚಲಾಯಿಸುತ್ತಿದ್ದರು. ಚಾಲಕ ಅಷ್ಟೇ ಅಲ್ಲ, ಪಾಪು ಅವರ ನಿತ್ಯದ ಕೆಲಸದ ಜೊತೆಗೆ ಅವರ ಸೇವೆಯನ್ನೂ ಮಾಡುತ್ತಿದ್ದರು. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಸಯ್ಯದ್, ಪಾಪು ಅವರ ಜೊತೆ ಇದ್ದು ಎಲ್ಲ ಕಾರ್ಯ ಮಾಡುತ್ತಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರತಿ ಕಾರ್ಯಕ್ರಮಕ್ಕೆ ಸಯ್ಯದ್ ಇರಲೇಬೇಕು ಎನ್ನುವ ಮನೋಭಾವ ಹೊಂದಿದ್ದರು ಪಾಪು.

ಸಂತೋಷ ಹಂಚಿಕೊಂಡ ಪಾಪು ಕಾರು ಚಾಲಕ ಸಯ್ಯದ್

ಪಾಪು ವಿಧಿವಶರಾದರೂ ಕೂಡ ನಂಬಿದವರನ್ನು ಎಂದಿಗೂ ಬಿಡಲ್ಲ ಎಂಬುದಕ್ಕೆ ಅವರು ಬರೆದಿಟ್ಟಿರುವ ವಿಲ್‌ ಸಾಕ್ಷಿ. 25 ವರ್ಷಗಳಿಂದ ಡಾ. ಪಾಟೀಲ್ ಪುಟ್ಟಪ್ಪರ ಸೇವೆ ಮಾಡಿದ ಕಾರು ಚಾಲಕ ಸಯ್ಯದ್, ತಮಗೆ ಉಡುಗೊರೆಯಾಗಿ ಬಂದಿರುವ ಕಾರಿನಿಂದ ಜೀವನ ಕಟ್ಟಿಕೊಳ್ಳಲು ಸಿದ್ಧರಾಗಿದ್ದಾರೆ. ಕನ್ನಡಕ್ಕೆ ಅನ್ಯಾಯವಾದ್ರೆ ಗುಡುಗುತ್ತಿದ್ದ ಗಟ್ಟಿ ಹೋರಾಟಗಾರನೊಳಗೆ 'ಪಾಪು'ವಿನಂತಾ ಮನಸ್ಸು ಕೂಡ ಇತ್ತು ಅನ್ನೋದಕ್ಕೆ ಇದೇ ಸಾಕ್ಷಿ..

ABOUT THE AUTHOR

...view details