ಹುಬ್ಬಳ್ಳಿ: ಜಿಲ್ಲೆಯಲ್ಲಿ ಖಾಸಗಿ ಮ್ಯಾಕ್ಸಿಕ್ಯಾಬ್, ಕ್ರೂಸರ್ಮ ತ್ತಿತರ ವಾಹನಗಳ ಮೂಲಕ ತೆರಳುವ ಪ್ರಯಾಣಿಕರ ನಿರ್ಬಂಧಿಸಲಾಗುತ್ತಿದೆ.
ಹುಬ್ಬಳ್ಳಿ: ಖಾಸಗಿ ವಾಹನಗಳ ಮೂಲಕ ಪ್ರಯಾಣ ನಿರ್ಬಂಧ - Passenger traffic restrictions
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಮ್ಯಾಕ್ಸಿಕ್ಯಾಬ್ , ಕ್ರೂಸರ್ ಮತ್ತಿತರ ವಾಹನಗಳ ಮೂಲಕ ಪ್ರಯಾಣ ನಿರ್ಬಂಧಿಸಲಾಗಿದ್ದು, ಪೊಲೀಸರು ಜನರಿಗೆ ತಿಳಿವಳಿಕೆ ಹೇಳಿದ್ದಾರೆ. ಕೆಲವು ವಾಹನ ಮಾಲೀಕರಿಗೆ ದಂಡ ಸಹ ಹಾಕಲಾಗುತ್ತಿದೆ.
ಹುಬ್ಬಳ್ಳಿ: ಖಾಸಗಿ ವಾಹನಗಳ ಮೂಲಕ ಪ್ರಯಾಣಿಕರ ಸಂಚಾರ ನಿರ್ಬಂಧ
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ. ಪೂರ್ವ ವಿಭಾಗದ ಕಚೇರಿಯ ವಾಹನ ನಿರೀಕ್ಷಕರು ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತ, ಗಬ್ಬೂರ ಕ್ರಾಸ್ ಮತ್ತಿತರ ಸ್ಥಳಗಳಲ್ಲಿ ಈ ಕಾರ್ಯ ಕೈಗೊಂಡು ವಾಹನ ಸವಾರರಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಇನ್ನೂ ಕೆಲವರಿಗೆ ದಂಡ ಸಹ ಹಾಕಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ತಿಳಿಸಿದ್ದಾರೆ.