ಕರ್ನಾಟಕ

karnataka

ETV Bharat / state

ಮಗನ ಸಾವಿನ ದುಃಖದಲ್ಲೂ ದಂಪತಿಯ ಸಾರ್ಥಕ ಕಾರ್ಯ... ಇನ್ನೊಂದು ಜೀವಕ್ಕೆ ದೇವರಾದ ದಂಪತಿ! - parents donate their son eyes in hubli

ಮಗ ಇಲ್ಲದಿದ್ದರೂ, ಮಗನ ಕಣ್ಣುಗಳು ಜಗತ್ತನ್ನ ನೋಡಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಮೂಲದ ದಂಪತಿ ಸಾರ್ಥಕ ಕಾರ್ಯ ಮಾಡಿದ್ದಾರೆ. ಅಕಾಲಿಕವಾಗಿ ಕಣ್ಮುಚ್ಚಿದ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಲ್ಲಿ ಬೆಳಕಾಗುವಂತೆ ಮಾಡಿದ್ದಾರೆ.

eyes
ನೇತ್ರದಾನ

By

Published : Sep 18, 2020, 9:13 PM IST

ಹುಬ್ಬಳ್ಳಿ: ನೇತ್ರದಾನ ಅನ್ನೋದು ಕೂಡ ಶ್ರೇಷ್ಠದಾನ ಅಂತಾರೆ. ಅದನ್ನು ಮನಗಂಡ ಇಲ್ಲೊಂದು ಕುಟುಂಬ ಹೃದಯಘಾತದಿಂದ ಸಾವನ್ನಪ್ಪಿದ ತಮ್ಮ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ, ಬೇರೆ ಜೀವ ಪ್ರಪಂಚವನ್ನು ನೋಡುವ ಹಾಗೆ ಮಾಡಿ ಸಾರ್ಥಕತೆ ಮೆರೆದಿದೆ.

ಮಗನ ಸಾವಿನ ದುಃಖದಲ್ಲೂ ದಂಪತಿಯ ಸಾರ್ಥಕ ಕಾರ್ಯ
ಮಾರುತಿ ಬಳ್ಳಾರಿ ಹಾಗೂ ದಂಪತಿ ಮೂಲತ ಹುಬ್ಬಳ್ಳಿ ನಿವಾಸಿಗಳು. ಇವರ ಮಗ ಗೌತಮ ಹುಟ್ಟಿನಿಂದಲೇ ವಿಶೇಷಚೇತನ. ಈತ ತನ್ನ 9 ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದ.

ಇಂತಹ ಸಂಕಷ್ಟಮಯ ಸನ್ನಿವೇಶದಲ್ಲೂ, ಹೆತ್ತವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಹುಬ್ಬಳ್ಳಿಯ ಕಿಮ್ಸ್​​ಗೆ ಮಗನ ಕಣ್ಣುಗಳ ಕಾರ್ನಿಯಾ ದಾನ ಮಾಡಿ ಇನ್ನೋರ್ವ ವ್ಯಕ್ತಿಗೆ ಬೆಳಕು ನೀಡಿದ್ದಾರೆ. ಮಗನ ಸಾವಿನ ದುಖಃದಲ್ಲೂ ಸಾರ್ಥಕತೆ ಮೆರೆದ ಪೋಷಕರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details