ಕರ್ನಾಟಕ

karnataka

ETV Bharat / state

ಪಾಕ್​ ಪರ ಘೋಷಣೆ ಪ್ರಕರಣ: ಮೂವರು ಕಾಶ್ಮೀರಿ​ ವಿದ್ಯಾರ್ಥಿಗಳು ರಿಲೀಸ್​! - 3 ಕಾಶ್ಮೀರಿ ವಿದ್ಯಾರ್ಥಿಗಳು ಬಿಡುಗಡೆ,

ಹುಬ್ಬಳ್ಳಿಯಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Pakistan Slogans case, Hubli Pakistan Slogans case, Hubli Pakistan Slogans case news, 3 Kashmiri Students release, 3 Kashmiri Students release news, ಪಾಕ್​ ಪರ ಘೋಷಣೆ ಪ್ರಕರಣ, ಹುಬ್ಬಳ್ಳಿಯಲ್ಲಿ ಪಾಕ್​ ಪರ ಘೋಷಣೆ ಪ್ರಕರಣ, ಹುಬ್ಬಳ್ಳಿಯಲ್ಲಿ ಪಾಕ್​ ಪರ ಘೋಷಣೆ ಪ್ರಕರಣ ಸುದ್ದಿ, 3 ಕಾಶ್ಮೀರಿ ವಿದ್ಯಾರ್ಥಿಗಳು ಬಿಡುಗಡೆ,  3 ಕಾಶ್ಮೀರಿ ವಿದ್ಯಾರ್ಥಿಗಳು ಬಿಡುಗಡೆ ಸುದ್ದಿ,
ಮೂವರು ವಿದ್ಯಾರ್ಥಿಗಳು ರಿಲೀಸ್

By

Published : Jun 11, 2020, 8:17 AM IST

ಹುಬ್ಬಳ್ಳಿ : ಪಾಕ್​ ಪರ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ​ ವಿದ್ಯಾರ್ಥಿಗಳಿಗೆ ಜಾಮೀನು‌‌ ಮಂಜೂರಾಗಿದೆ. ಹುಬ್ಬಳ್ಳಿಯ ಜೆಎಂಎಫ್​ಸಿ 2ನೇ ನ್ಯಾಯಾಲಯ ಜಾಮೀನಿನ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಿದೆ.

ಪಾಕ್​ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ್​​​​ ಅಣವೇಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೊಲೀಸರ ಬೇಜವಾಬ್ದಾರಿತನವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸರು ನಿಗದಿತ ಸಮಯದಲ್ಲಿ ಚಾರ್ಜ್​​​​​​​ಶೀಟ್ ಸಲ್ಲಿಸದೇ ಇರುವುದರಿಂದ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. 90 ದಿನದಲ್ಲಿ ಚಾರ್ಜ್​​​​ಶೀಟ್ ದಾಖಲಿಸಬೇಕಾಗಿತ್ತು. ಆದ್ರೆ ಗ್ರಾಮೀಣ ಪೊಲೀಸರು 109 ದಿನಗಳ ನಂತರ ಚಾರ್ಜ್​​​​​ಶೀಟ್ ಸಲ್ಲಿಸಿದ್ದರು. ಹೀಗಾಗಿ ಆರೋಪಿಗಳು ಜಾಮೀನು ಮೇಲೆ ಹೊರ ಬರುವಂತಾಯಿತು ಎಂದು ದೂರಿದ್ದಾರೆ.

ಈ ಪ್ರಕರಣದಲ್ಲಿ ಎಫ್​ಐಆರ್ ದಾಖಲಿಸುವುದರಿಂದ ಹಿಡಿದು ಚಾರ್ಜ್ ಶೀಟ್ ಸಲ್ಲಿಸುವವರಿಗೂ ಪೊಲೀಸರ ವೈಫಲ್ಯ ಹಾಗೂ ನಿರ್ಲಕ್ಷ್ಯ ಕಾಣಿಸಿದ್ದು, ಉದ್ದೇಶ ಪೂರ್ವಕವಾಗಿ ಒಂದು ಕಡೆ ಕಾಶ್ಮೀರಿ ವಿದ್ಯಾರ್ಥಿಗಳನ್ನು ರಕ್ಷಿಸುವ ಷಡ್ಯಂತ್ರ ನಡೆಯುತ್ತಿದೆ. ಗೃಹ ಸಚಿವರು ಕರ್ತವ್ಯ ಲೋಪ ಎಸಗಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಯುವ ವಕೀಲರ ಸಂಘ ಒತ್ತಾಯಿಸಿದೆ.‌

ABOUT THE AUTHOR

...view details