ಹುಬ್ಬಳ್ಳಿ:ದೇಶದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆ ದಿನಕಳೆದಂತೆ ಜನರನ್ನ ಭಯಭೀತರನ್ನಾಗಿಸಿದೆ. ಮಹಾಮಾರಿ ಹೊಡೆತಕ್ಕೆ ಸಿಲುಕಿರೋ ಜನರು ಬೆಡ್, ಆಕ್ಸಿಜನ್ ಸಿಗದೇ ರಸ್ತೆಯಲ್ಲೆ ಒದ್ದಾಟ ನಡೆಸುವಂತಾಗಿದೆ. ಆದರೆ ಈ ಆಸ್ಪತ್ರೆ ಮಾತ್ರ ಸದ್ಯ ಕೊರೊನಾ ಎರಡನೇ ಅಲೆ ಎದುರಿಸೋಕೆ ಸನ್ನದ್ಧವಾಗಿದೆ. ಅಲ್ಲದೆ ಬರೋಬ್ಬರಿ 1200 ಬೆಡ್‌ಗಳಿಗೆ ಆಕ್ಸಿಜನ್ ಪೂರೈಕೆ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆ.
ಹೌದು, ಉತ್ತರ ಕರ್ನಾಟಕ ಭಾಗದ ಬಡವರ ಪಾಲಿನ ಸಂಜೀವಿನಿ ಎಂದೇ ಕರೆಯಿಸಿಕೊಳ್ಳೋ ಕಿಮ್ಸ್ ಆಸ್ಪತ್ರೆ, ಸದ್ಯ ಕೊರೊನಾ ಕಾಲದಲ್ಲೂ ಮತ್ತೊಮ್ಮೆ ಸಂಜೀವಿನಿಯಾಗುತ್ತಿದೆ. ಯಾಕೆಂದ್ರೆ ಕಳೆದ ವರ್ಷವೂ ಕೂಡ ಪ್ಲಾಸ್ಮಾ ಥೆರಪಿ ಹಾಗೂ ಇನ್ನಿತರ ಸೌಕರ್ಯಗಳ ಐಸಿಎಂಆರ್‌ನಿಂದಲೇ ಮೆಚ್ಚುಗೆ ಪಡೆದಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಸೃಷ್ಠಿಯಾಗಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮಾತ್ರ ಅದ್ಯಾವ ಸಮಸ್ಯೆಯೂ ಇಲ್ಲ. ಯಾಕೆಂದ್ರೆ ಕಿಮ್ಸ್‌ನಲ್ಲೇ ಸುಮಾರು 40 ಕಿಲೋ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತಿದೆ. ಅಲ್ಲದೆ ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 20 ಕಿಲೋ ಲೀಟರ್ ಆಕ್ಸಿಜನ್ ಇದೆ. ಕಿಮ್ಸ್‌ನ ಆಕ್ಸಿಜನ್ ಬರೋಬ್ಬರಿ 1200 ಬೆಡ್‌ಗಳಿಗೆ ಒದಗಿಸಬಹುದಾಗಿದೆ. ಹೀಗಾಗೇ ಸದ್ಯ ಕಿಮ್ಸ್ ಹಾಗೂ ಧಾರವಾಡದಲ್ಲಿ ಆಕ್ಸಿಜನ್ ಅಭಾವ ಸೃಷ್ಠಿಯಾಗಿಲ್ಲ. ಯಾಕೆಂದ್ರೆ ಪ್ರತಿನಿತ್ಯ 250ರಿಂದ 280 ಕೇಸ್‌ಗಳು ಬಂದ್ರು 200ಕ್ಕಿಂತ ಹೆಚ್ಚಿನ ಜನ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹೀಗಾಗೇ ಕೇವಲ 30 ಪ್ರತಿಶತ ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಿದ್ದು, ಅವರಿಗೆ ನೀಡಬೇಕಾದ ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಲಭ್ಯ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ ಕಿಮ್ಸ್ ನಿರ್ದೇಶಕರು.