ಹುಬ್ಬಳ್ಳಿ: ನಾಡೋಜ ದಿ. ಡಾ. ಪಾಟೀಲ್ ಪುಟ್ಟಪ್ಪನವರು ನಾಡು ನುಡಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರು ನಿಧನರಾದ ಬಳಿಕ ಸರ್ಕಾರ ನಮ್ಮ ತಾತನವರ ಸಾಧನೆಯತ್ತ ಗಮನ ಹರಿಸುತ್ತಿಲ್ಲ ಹೀಗಾಗಿ ಪಾಪು ಅವರ ಪರಿಚಯ ಹಾಗೂ ಸಾಧನೆಗಳ ಕುರಿತಂತೆ, ರಾಜ್ಯ ಸರ್ಕಾರ ಶಾಲಾ-ಕಾಲೇಜ್ ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸುವ ಮೂಲಕ ಮುಂಬರುವ ಪೀಳಿಗೆಗೆ ಅರ್ಥೈಸಬೇಕೆಂದು ನಾಡೋಜ ದಿ. ಡಾ. ಪಾಟೀಲ್ ಪುಟ್ಟಪ್ಪನವರ ಮೊಮ್ಮಗಳಾದ ವಿಜಯಾ ಪಾಟೀಲ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಪಾಪು ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ ನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪಾಟೀಲ್ ಪುಟ್ಟಪ್ಪನವರ ಪುತ್ಥಳಿ ನಿರ್ಮಿಸಬೇಕು, ಹುಬ್ಬಳ್ಳಿಯಲ್ಲಿ ಒಂದು ರಸ್ತೆಗೆ ಪಾಪು ಅವರ ಹೆಸರಿಡಬೇಕು, ಅಲ್ಲದೇ ಹು-ಧಾ ಪಾಪು ಅವರ ಕರ್ಮ ಭೂಮಿಯಾಗಿದ್ದು, ಅವಳಿ ನಗರದ ಮಧ್ಯೆ ಅವರ ಹೆಸರಿನಲ್ಲಿ 5 ಎಕರೆ ಭೂಮಿ ಮೀಸಲಿಡಬೇಕು ಎಂದು ವಿಜಯಾ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದರು.