ಕರ್ನಾಟಕ

karnataka

ETV Bharat / state

ಯೋಗೀಶ್ ಗೌಡ ಕೊಲೆ ಪ್ರಕರಣ... ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ : ಕೆ.ಎಸ್.ಈಶ್ವರಪ್ಪ - ಬೆಳಗಾವಿ ಸುವರ್ಣಸೌಧ

ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಲು ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೆ.ಎಸ್.ಈಶ್ವರಪ್ಪ

By

Published : Sep 7, 2019, 10:54 AM IST

ಹುಬ್ಬಳ್ಳಿ : ಭ್ರಷ್ಟಾಚಾರ, ಗೂಂಡಾಗಳು ಹಾಗೂ ಕೊಲೆಗಡಕರಿಗೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ದೇಶದಲ್ಲಿತ್ತು. ಆದರೆ ಆ ನಂಬಿಕೆ ಹುಸಿಯಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಈಶ್ವರಪ್ಪ, ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಲು ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದರು.

ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ

ನಾಳೆ ಮತ್ತು ನಾಡಿದ್ದು ಬೆಳಗಾವಿ ಸುವರ್ಣಸೌಧದಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳ ಸಮಾವೇಶಗಳನ್ನ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗಾವಿ, ಚಿಕ್ಕೋಡಿ ವಿಭಾಗದದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಕಾರಗಳನ್ನು ಕಳಿಸಿ ಸಮೀಕ್ಷೆ ಮಾಡಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡುತ್ತೆ ಎಂಬ ನಂಬಿಕೆ ಇದೆ. ನೆರೆ ಹಾವಳಿಗೆ ಸಂಬಂಧಿಸಿದಂತೆ ಈಗ ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆರೆ ಪರಿಹಾರ ಶೇ.99 ಭಾಗ ವಿತರಣೆಯಾಗಿದೆ. ಈಗ ತಾತ್ಕಾಲಿಕ ಸಮಸ್ಯೆ ನಿವಾರಣೆ ಮಾಡಲಾಗಿದೆ.‌ ಮುಂದೆ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವದು ಎಂದು ತಿಳಿಸಿದರು.

ABOUT THE AUTHOR

...view details