ಕರ್ನಾಟಕ

karnataka

ETV Bharat / state

ಮೋಹನ್ ಲಿಂಬಿಕಾಯಿಗೆ ತಟ್ಟಿದ ಮೂಲ ಕಾಂಗ್ರೆಸ್ಸಿಗರ ವಿರೋಧದ ಬಿಸಿ - ticket fight

ಜಿಲ್ಲಾ ಕಮಿಟಿ ಜೊತೆ ಚರ್ಚಿಸದೆ ಮೋಹನ್ ಲಿಂಬಿಕಾಯಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹು-ಧಾ ಕಾಂಗ್ರೆಸ್​ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಅಸಮಾಧಾನ ಹೊರಹಾಕಿದ್ದಾರೆ.

original-congressmens-opposition-to-mohan-limbikai
ಮೋಹನ್ ಲಿಂಬಿಕಾಯಿಗೆ ತಟ್ಟಿದ ಮೂಲ ಕಾಂಗ್ರೆಸ್ಸಿಗರ ವಿರೋಧದ ಬಿಸಿ

By

Published : Mar 23, 2023, 6:54 PM IST

Updated : Mar 23, 2023, 7:52 PM IST

ಮೋಹನ್ ಲಿಂಬಿಕಾಯಿಗೆ ತಟ್ಟಿದ ಮೂಲ ಕಾಂಗ್ರೆಸ್ಸಿಗರ ವಿರೋಧದ ಬಿಸಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್ ಜೋರಾಗಿದೆ. ಮೋಹನ್ ಲಿಂಬಿಕಾಯಿಗೆ ಕಾಂಗ್ರೆಸ್ಸಿಗರ ವಿರೋಧದ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ. ‌ಮೋಹನ್ ಲಿಂಬಿಕಾಯಿ ಸ್ಪರ್ಧೆಗೆ ಮೂಲ ಕಾಂಗ್ರೆಸ್ಸಿಗರ ವಿರೋಧ ವ್ಯಕ್ತವಾಗಿದ್ದು, ಜಿಲ್ಲಾ ಕಮಿಟಿ ಜೊತೆ ಚರ್ಚಿಸದೆ ಮೋಹನ್ ಲಿಂಬಿಕಾಯಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಅಸಮಾಧಾನ ಹೊರ ಹಾಕಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋಹನ್​ ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆ ಕುರಿತು ಮುಂಚೆಯೇ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಅವರು ಯಾವುದೇ ಷರತ್ತು ಇಲ್ಲದೆ ಬಂದಿದ್ದಾರೆ.‌ ಅರವಿಂದ ಬೆಲ್ಲದ್‌ ಅವರನ್ನು ಸೋಲಿಸಲು ಉತ್ತಮ ಅಭ್ಯರ್ಥಿ ಕೊಡಿ ಎಂದು ಅಲ್ಲಿನ ಮತದಾರರು, ಕಾರ್ಯಕರ್ತರು ಕೇಳುತ್ತಿದ್ದಾರೆ. ಮೂಲ‌ ಕಾಂಗ್ರೆಸ್‌ನವರಿಗೆ ಟಿಕೆಟ್ ಕೊಡಿ‌ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು ಮತ್ತು ಧರ್ಮಾಧಾರಿತ ರಾಜಕಾರಣವೇ ಇವರಿಗೆ ಮುಖ್ಯವಾಗಿದೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು. ಹಬ್ಬದ ಹೆಸರಿನಲ್ಲಿ ಹಲಾಲ್‌ ಮಾಂಸ ವಿರೋಧ ಮಾಡುವ ಬಿಜೆಪಿಯವರೇ, ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.

ಕೋಮು ರಾಜಕೀಯದ ಆಟ ಹೆಚ್ಚು ದಿನ‌ ನಡೆಯಲ್ಲ- ಹಳ್ಳೂರ್: ಚುನಾವಣೆಗಾಗಿ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪಿಸಿದರು. ದರ್ಗಾ ತೆರವು, ಮೈದಾನದ ಹೆಸರು ಬದಲಾವಣೆಯಂತಹ ಕೆಲಸಗಳಲ್ಲಿ ನಿರತರಾಗಿದ್ದಾರೆ. ಎಸ್‌ಡಿಪಿಐ, ಎಐಎಂಐಎಂ ಅಭ್ಯರ್ಥಿಗಳು ಕಾಂಗ್ರೆಸ್ ಗೆಲುವಿಗೆ ಸವಾಲಲ್ಲ. ಎಐಎಮ್‌ಐಎಮ್ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ) ಬಿಜೆಪಿಯ ಬಿ ಟೀಮ್. ಕೋಮು ರಾಜಕೀಯದ ಆಟ ಹೆಚ್ಚು ದಿನ‌ ನಡೆಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಲ್ಲಿ ದುಡಿದವರು ಟಿಕೆಟ್​ ಕೇಳುವುದು ಸಹಜ: ನಮ್ಮದು ಅತ್ಯಂತ ಹಳೆ ಪಕ್ಷ ಸಾಕಷ್ಟು ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ಇದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಹತ್ತರಿಂದ ಹದಿನೈದು ಜನ ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದಲ್ಲಿ ದುಡಿದವರು ಟಿಕೆಟ್​ ಕೇಳುವುದು ಸಹಜ ಆದರೆ ಟಿಕೆಟ್​ ಸಿಗುವುದು ಒಬ್ಬರಿಗೆ, ಟಿಕೆಟ್​ ಯಾರಿಗೆ ಸಿಕ್ಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು, ಅಧಿಕಾರಕ್ಕೆ ಬಂದು ಈ ಭಾಗದ ಅಭಿವೃದ್ದಿ ಮಾಡಬೇಕು ಎಂದು ಹೇಳಿದರು.

ಸ್ವಪಕ್ಷದಲ್ಲೇ ಶಾಸಕ ಅರವಿಂದ್​ ಬೆಲ್ಲದ್​ಗೆ ಎದುರಾಳಿ:ಮುಖ್ಯಮಂತ್ರಿ ರೇಸ್ ನಲ್ಲಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸ್ವಪಕ್ಷದಲ್ಲೇ ಸ್ಪರ್ಧಿಗಳು ಎದುರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಿ ಎಂದು ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನನಗೆ ಟಿಕೆಟ್ ಕೊಡಿ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ನಾಯಕತ್ವ ಬದಲಾವಣೆ?: ನಿಜವಾಗುತ್ತಾ ಧಾರವಾಡ ಗೊಂಬೆ ಭವಿಷ್ಯ?

Last Updated : Mar 23, 2023, 7:52 PM IST

ABOUT THE AUTHOR

...view details