ಕರ್ನಾಟಕ

karnataka

ETV Bharat / state

ಧಾರವಾಡ: ಪೌರಕಾರ್ಮಿಕರಿಗೆ ಹ್ಯಾಂಡ್​ ಗ್ಲೌಸ್​ ನೀಡಿದ ಸಂಘ ಸಂಸ್ಥೆಗಳು - Organizations give hand gloves to civic workers

ಧಾರವಾಡ ನಗರದ ಇನ್ನೂರಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಹೆಲ್ತ್​ಕೇರ್ ಹ್ಯಾಂಡ್​ಗ್ಲೌಸ್​ ನೀಡುವುದರ ಮೂಲಕ ನಗರದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಪೌರ ಕಾರ್ಮಿಕಕರಿಗೆ ಸಂಘ ಸಂಸ್ಥೆಗಳು ಕೃತಜ್ಞತೆ ಅರ್ಪಿಸಿವೆ.

ಪೌರಕಾರ್ಮಿಕರಿಗೆ ಹ್ಯಾಂಡ್​ಗ್ಲೋಸ್ ನೀಡಿದ ಸಂಘ ಸಂಸ್ಥೆಗಳು
ಪೌರಕಾರ್ಮಿಕರಿಗೆ ಹ್ಯಾಂಡ್​ಗ್ಲೋಸ್ ನೀಡಿದ ಸಂಘ ಸಂಸ್ಥೆಗಳು

By

Published : Apr 3, 2020, 10:18 AM IST

Updated : Apr 3, 2020, 12:31 PM IST

ಧಾರವಾಡ: ಕಲ್ಪತರು ಮಹಿಳಾ ಸಂಘ, ಶಿವಾನಂದ ನಗರ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘ ಸಹಯೋಗದಲ್ಲಿ ಧಾರವಾಡ ನಗರದ ಇನ್ನೂರಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಹೆಲ್ತ್​ಕೇರ್ ಹ್ಯಾಂಡ್​ ಗ್ಲೌಸ್​ ನೀಡುವುದರ ಮೂಲಕ ನಗರದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಪೌರ ಕಾರ್ಮಿಕಕರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಪೌರಕಾರ್ಮಿಕರಿಗೆ ಹ್ಯಾಂಡ್​ ಗ್ಲೌಸ್​ ನೀಡಿದ ಸಂಘ ಸಂಸ್ಥೆಗಳು

ಕಲ್ಪತರು ಮಹಿಳಾ ಮಂಡಳದ ಆರತಿ ಪಾಟೀಲ ಮಾತನಾಡಿ, ಪೌರ ಕಾರ್ಮಿಕರು ಕಠಿಣ ಸಂದರ್ಭದಲ್ಲಿಯೂ ನಮ್ಮ ನಗರ ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಈ ಕೊರೊನಾ ವೈರಸ್ ನಾಶ ಮಾಡಲು ಮುಂಜಾನೆ ಆರು ಘಂಟೆಯಿಂದ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ನಮ್ಮ ಮಹಾನಗರ ಪಾಲಿಕೆ ಹಾಗೂ ಧಾರವಾಡ ಜಿಲ್ಲಾಡಳಿತ , ಛಾಯಾಗ್ರಾಹಕರು, ಪತ್ರಕರ್ತರು , ಪತ್ರಿಕಾ ವಿತರಕರು ಹೀಗೆ ಮುಂತಾದವರು ಸಾಕಷ್ಟು ಮುಂಜಾಗ್ರತಾ ಕ್ರಮವಾಗಿ ಜನತೆಗೆ ತಿಳುವಳಿಕೆ ನೀಡುತ್ತಾ ಬಂದಿರುವುದು ನಮ್ಮ ಜನತೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಎಂದು ಹೊಗಳಿದರು.

ಪ್ರಜ್ವಲ ಹವ್ಯಾಸಿ ಕನ್ನಡ ಕೊಂಕಣಿ ಸಂಘದ ಪರವಾಗಿ ಸಂತೋಷ ಗಜಾನನ ಮಹಾಲೆ ಮಾತನಾಡಿ, ಬಾಗಲಕೋಟೆ ಪೆಟ್ರೋಲ್ ಬಂಕ್, ಲೈನಬಜಾರ ಹನುಮಂತ ದೇವರ ದೇವಸ್ಥಾನ, ಟೋಲನಾಕಾ, ಮಾಳಮಡ್ಡಿ ವನವಾಸಿ ರಾಮಮಂದಿರ ಹೀಗೆ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರಿಗೆ ಹ್ಯಾಂಡ್​ಗ್ಲೋಸ್ ನೀಡಿದ್ದೇವೆ ಎಂದರು.

Last Updated : Apr 3, 2020, 12:31 PM IST

ABOUT THE AUTHOR

...view details